ಕೊಡಿಯಾಲಬೈಲು: ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಅಮರ ಶಿಲ್ಪಿ ದಿ. ಡಾ.ಕುರುಂಜಿ ವೆಂಕಟರಮಣ ಗೌಡ ಇವರ 95ನೇ ಜಯಂತ್ಯೋತ್ಸವ , ಆಚರಿಸಲಾಯಿತು. ಕಾರ್ಯಕ್ರಮದಲ್ಲಿ
ಕೆವಿಜಿ ಯವರ ಸಾಧನೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರೊ.ಎಂ ಬಾಲಚಂದ್ರ ಗೌಡ ಇವರು ಕೆವಿಜಿ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರದ ಶ ಸತೀಶ್ ಕುಮಾರ್ ಕೆ.ಆರ್, ಕಾರ್ಯಕ್ರಮ ನಿರ್ದೇಶಕರಾದ ವೀರಪ್ಪ ಗೌಡ, ಜನಾರ್ಧನ್ ಹಾಗೂ ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪುಷ್ಪರಾಜ್ ಉಪಸ್ಥಿತರಿದ್ದರು.
ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.












