ಸುಳ್ಯ: ಸರಕಾರಿ ಪದವಿಪೂರ್ವ ಕಾಲೇಜು ಅಮೃತ ಮಹೋತ್ಸವ ಹಿನ್ನಲೆಯಲ್ಲಿ ವಸ್ತು ಪ್ರದರ್ಶನ ಮತ್ತು ಅಮೃತ ಮೇಳವು ಡಿ.27 ರಿಂದ ಡಿ.29ರ ವರೆಗೆ ನಡೆಯಲಿದೆ ಎಂದು ವಸ್ತು ಪ್ರದರ್ಶನ ಸಮಿತಿ ವ್ಯವಸ್ಥಾ ನಿರ್ವಾಹಕ ಕೆ ಗೋಕುಲ್ ದಾಸ್ ತಿಳಿಸಿದರು.
ಅವರು ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜು ಅಮೃತ ಮಹೋತ್ಸವ ಸಮಿತಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಶೈಕ್ಷಣಿಕ, ಔದ್ಯೋಗಿಕ,ಕೃಷಿ,ವ್ಯಾಪಾರ, ಆಹಾರ,ಆರೋಗ್ಯ ಮತ್ತು ತಾಂತ್ರಿಕ ವಿಷಯಗಳನ್ನು ಒಳಗೊಂಡ
ವಸ್ತು ಪ್ರದರ್ಶನ 3 ದಿನಗಳ ಕಾಲ ನಡೆಯಲಿದ್ದು ಸುಮಾರು 50ಕ್ಕೂ ಅಧಿಕ ಹೆಚ್ಚಿನ ಸ್ಟಾಲ್ಗಳನ್ನು ಹೊಂದಿದ್ದು ಈಗಾಗಲೇ ನೋಂದಣಿ ಆರಂಭಗೊಂಡಿದ್ದು ಉತ್ತಮ ಸ್ಪಂದನೆ ಸಿಗುತ್ತಿದ್ದು ಸ್ಟಾಲ್ಗಳಲ್ಲಿ ವಿವಿಧ ಶೈಕ್ಷಣಿಕ ವಿಭಾಗಗಳ ಮಾಹಿತಿ , ವೃತ್ತಿ ಮಾರ್ಗದರ್ಶನದ ಮಾಹಿತಿ ಸೇರಿದಂತೆ ಇತರೆ ವಿಭಾಗಗಳನ್ನು ಹೊಂದಿದ್ದು ಪ್ರದರ್ಶನದ ವಿಷಯಗಳಾಗಿ ಕೃಷಿ ಸಂಬಂಧಿತ ಮಳಿಗೆ, ವಾಹನ ಪ್ರದರ್ಶನ ಮತ್ತು ಮತ್ತು ಮಾರಾಟ ಮಳಿಗೆ,ಆರ್ಥಿಕ ಸಂಸ್ಥೆಗಳ ಮಾಹಿತಿ, ಆಹಾರ ಮಳಿಗೆಗಳಿಗೆ ಪ್ರತ್ಯೇಕ ಸ್ಥಳವಕಾಶದ ಜೊತೆಗೆ ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳ ಮಳಿಗೆ ,ಪುಸ್ತಕ ಮಳಿಗೆ ಜೊತೆಗೆ ಆಕರ್ಷಣೀಯವಾಗಿ ಅಮ್ಯೂಸ್ಮೆಂಟ್ ಹಾಗೂ ಆಟೋಟ ಕೇಂದ್ರಗಳು ಇರಲಿದೆ ಎಂದು ತಿಳಿಸಿದರು. ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಮಾತನಾಡಿ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ 10ಕ್ಕೂ ಅಧಿಕ ವಿದ್ಯಾಸಂಸ್ಥೆಗಳು ಭಾಗವಹಿಸಲಿದ್ದು ಕಲೆ, ವಿಜ್ಞಾನ, ಇತಿಹಾಸ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಲಿಂಗಪ್ಪ ಗೌಡ ಕೇರ್ಪಳ,ರಂಜಿತ್ ಅಡ್ತಲೆ ಉಪಸ್ಥಿತರಿದ್ದರು.













