ಸುಳ್ಯ:ಸುಳ್ಯದ ಕೊಡಿಯಾಲಬೈಲು ಗಾಂಧಿವನದ ಸಮೀಪ ನಿರ್ಮಾಣಗೊಂಡಿರುವ ಪಯಸ್ವಿನಿ ಗೋಶಾಲೆಯನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವಸಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಬೆಂಗಳೂರಿನ ಪ್ರಣವ ಫೌಂಡೇಶನ್ ಮಧ್ಯೆ ಒಡಂಬಡಿಕೆ ಮಾಡಿ ಕೊಳ್ಳಲಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿಯಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಒಡಂಬಡಿಕೆಗೆ ಸಹಿ ಮಾಡಿ ಒಡಬಂಡಿಕೆ ಪತ್ರವನ್ನು
ಹಸ್ತಾಂತರ ಮಾಡಲಾಯಿತು. ಸರಕಾರ ನೀಡಿದ 50 ಲಕ್ಷ ಅನುದಾನದಲ್ಲಿ ಕೊಡಿಯಾಲಬೈಲಿನಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗಿದ್ದು ಇದರ ನಿರ್ವಹಣೆಯನ್ನು ಪ್ರಣವ ಫೌಂಡೇಶನ್ ಮಾಡಲಿದೆ. ಪಿಪಿಪಿ ಮಾದರಿಯಲ್ಲಿ ಗೋಶಾಲೆಯ ನಿರ್ವಹಣೆಗೆ ಇಲಾಖೆಯ ಆದೇಶ ಇದೆ. ಈ ಹಿನ್ನಲೆಯಲ್ಲಿ ಪ್ರಣವ ಫೌಂಡೇಶನ್ ಜೊತೆ ಒಡಂಬಡಿಗೆ ಮಾಡಿಕೊಳ್ಳಲಾಗಿದೆ. ಇದನ್ನು ಇಲಾಖೆಗೆ ಕಳುಹಿಸಿ ಅನುಮತಿ ದೊರೆತ ಕೂಡಲೇ ಹಸ್ತಾಂತರ ಮಾಡಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ.
ಸರಕಾರದ 50 ಲಕ್ಷ ಅನುದಾನದಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗಿದೆ.ಮುಂದೆ ಅಲ್ಲಿ ಅಗತ್ಯ ನಿರ್ಮಾಣ, ವ್ಯವಸ್ಥೆ, ನಿರ್ವಹಣೆಯನ್ನು ಫೌಂಡೇಶನ್ ಮಾಡಲಿದೆ. ಇಲಾಖೆ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಸರಕಾರದಿಂದ ಕಾಲ ಕಾಲಕ್ಕೆ ದೊರೆಯುವ ಅನುದಾನವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಗೋಶಾಲೆಯಲ್ಲಿ ಗೋಪಾಲಕರ ವಸತಿ ಗೃಹ, ಆಡಳಿತ ಕಚೇರಿ, ಹಿಂಡಿ ಮೇವು ಹುಲ್ಲು ಶೇಖರಿಸುವ ಕೊಠಡಿ ನಿರ್ಮಾಣ ಮಾಡಿ ವ್ಯವಸ್ಥಿತವಾಗಿ ಮಾಡಿ ನಿರ್ವಹಣೆ ಮಾಡಲಾಗುವುದು ಎಂದು ಪ್ರಣವ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ ತಿಳಿಸಿದ್ದಾರೆ.
ಪ್ರಕರಣ ಮತ್ತಿತರ ಸಂಬಂಧಪಟ್ಟು ಪೊಲೀಸ್ ಇಲಾಖೆ ವಶ ಪಡಿಸುವ ಗೋವುಗಳು, ಬಿಡಾಡಿ ದನಗಳನ್ನು ಆದ್ಯತೆಯ ಮೇರೆಗೆ ಗೋಶಾಲೆಯಲ್ಲಿ ಸಂರಕ್ಷಣೆ ಮಾಡಲಾಗುವುದು ಎಂದು ನಿತಿನ್ ಪ್ರಭು ತಿಳಿಸಿದ್ದಾರೆ.
ಲಶಾಸಕಿ ಭಾಗೀರಥಿ ಮುರುಳ್ಯ, ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು, ಪ್ರಣವ ಫೌಂಡೇಶನ್ ಅಧ್ಯಕ್ಷ ರಾಕೇಶ್ ರೈ, ಕಾರ್ಯದರ್ಶಿ ನಾಗರಾಜ ಬಿ ಹೆಬ್ಬಾಳ್, ಸಂಚಾಲಕ ಮಹೇಶ್ ಕುಮಾರ್ ಮೇನಾಲ,ಟ್ರಸ್ಟಿ ರಕ್ಷಿತ್ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಶ್ರೀನಾಥ್ ಬಾಳಿಲ, ಸುನಿಲ್ ಕೇರ್ಪಳ ಸುಪ್ರಿತ್ ಮೋಂಟಡ್ಕ, ಅಶೋಕ್ ಅಡ್ಕಾರ್, ಹೇಮಂತ ಮಠ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.