ಗೂನಡ್ಕ:ಮಿಲಾದುನ್ನಬಿ ಪ್ರಯುಕ್ತ ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಬಿ ಜೆ ಎಂ ಗೂನಡ್ಕ ಇದರ ವತಿಯಿಂದ 3 ದಿನಗಳ ಕಾಲ ನಡೆದ ಬೃಹತ್ ಮಿಲಾದ್ ಸಮಾವೇಶದ ಪ್ರಯುಕ್ತ ಸರ್ವ ಧರ್ಮೀಯರ ಸ್ನೇಹ ಸಮಿಲನ ಕಾರ್ಯಕ್ರಮ ನಡೆಯಿತು. ಖತೀಬರಾದ ಅಬೂಬಕ್ಕರ್ ಸಿದ್ದೀಖ್ ಸಖಾಪಿ ಅಲ್ ಹರ್ಷದಿ ಪ್ರಾರ್ಥನೆ ನೆರವೇರಿಸಿದರು. ಜಮಾಅತ್ ಅಧ್ಯಕ್ಷರಾದ
ಮಹಮ್ಮದ್ ಕುಂಞಿ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಶಿರಾಡಿ ದೇವಸ್ತಾನದ ಆಡಳಿತ ಮಂಡಳಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಉದ್ಘಾಟಿಸಿದರು. ಸಭಾಹ್ ಹಿಮಮಿ ಬೀಜ ಕೊಚ್ಚಿ,
ಕೆ ಪಿ ಜಾನಿ, ಸಂತೋಷ್ ಕುತ್ತಮೊಟ್ಟೆ, ಡಾ.ಉಮ್ಮರ್ ಬೀಜದಕಟ್ಟೆ, ಡಿ ವಿ ಸತೀಶ, ಎಂ ವೆಂಕಪ್ಪ ಗೌಡ ಸುಳ್ಯ, ಹಮೀದ್ ಕುತ್ತಮೊಟ್ಟೆ
ಉಮೇಶ್ ಚಂದ್ರ ಕೆ ವಿ, ಇಬ್ರಾಹಿಂ ಗೂನಡ್ಕ, ಅಶೋಕ್ ಎಡಮಲೆ,ಕೆ ಪಿ ಜಗದೀಶ್, ನವೀನ್ ಗೌಡ ಇರ್ನೆಬೈಲೆ, ಪೈಝಲ್ ಕಟ್ಟೆಕ್ಕಾರ್ಸ್
ಹಾಜಿ ಪಿ ಎ ಉಮ್ಮರ್ ಗೂನಡ್ಕ,ರವಿ ಪ್ರಕಾಶ್ ಸುಳ್ಯ,
ರಾಮ ಚಂದ್ರ ಕಲ್ಲಗೆದ್ದೆ,ಗಣಪತಿ ಭಟ್ ,ಶಂಸುದ್ದೀನ್ ಸಾಲ್ಮರ, ಯು ಬಿ ಚಕ್ರಪಾಣಿ ,ಕೆ ಎಸ್ ಉಮ್ಮರ್ ಸುಳ್ಯ ವಸಂತ ಪೆಲ್ತಡ್ಕ ಜ್ಞಾನಶೀಲನ್ ನೆಲ್ಲಿಕುಮೇರಿ, ಭಾಗವಹಿಸಿದ್ದರು.
ಶೌವಾದ್ ಗೂನಡ್ಕ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು.
ಪಿ ಕೆ ಅಬೂಶಾಲಿ ವಂದಿಸಿದರು.












