ಗೂನಡ್ಕ: ಗೂನಡ್ಕದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ನ ಗೂನಡ್ಕ 12 ನೇ ವಾರ್ಷಿಕ ಮಹಾಸಭೆಯು ಅಸೋಸಿಯೇಷನ್ ಅಧ್ಯಕ್ಷ ಜಾಫರ್ ಸಾಧಿಕ್ ಕುಂಭಕ್ಕೋಡ್ ಅಧ್ಯಕ್ಷತೆಯಲ್ಲಿ ಗೂನಡ್ಕ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ನಢಯಿತು. ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮಹಮ್ಮದ್ ಅಲಿ ಸಖಾಫಿ ವಿಶೇಷ ಪ್ರಾರ್ಥನೆ ಸಲ್ಲಿಸಿ
ಮಹಾಸಭೆಗೆ ಚಾಲನೆ ನೀಡಿದರು.ಅಸೋಸಿಯೇಷನ್ ಗೌರವಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಟಿ.ಬಿ. ಅಬ್ದುಲ್ ಅಝೀಝ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಈ ವರ್ಷ ಬಡ ಹೆಣ್ಣುಮಕ್ಕಳ ವಿವಾಹಕ್ಕೆ 4 ಲಕ್ಷ ರೂ ಹಾಗೂ ಗೌರವ ಶಿಕ್ಷಕರ ವೇತನಕ್ಕೆ 25,000 ರೂ ನೀಡಲಾಗಿದೆ. ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷರಾದ ಡಿ.ಆರ್.ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಪಿ.ಎ.ಉಮರ್ ದರ್ಕಾಸ್ತು , ಜಮಾಅತ್ ಮಾಜಿ ಅಧ್ಯಕ್ಷರಾದ ಹಾಜಿ ಪಿ.ಎ. ಉಮರ್ ಗೂನಡ್ಕ, ಹಾಜಿ ಪಿ.ಎ. ಅಬ್ದುಲ್ಲಾ ಕೊಪ್ಪದಕಜೆ, ಹಯಾತುಲ್ ಇಸ್ಲಾಂ ಮದ್ರಸ ಗೂನಡ್ಕ ಇಲ್ಲಿಯ ಸದರ್ ಮುಅಲ್ಲಿಮರಾದ ಹಬೀಬ್ ಹಿಮಮಿ, ಅಸೋಸಿಯೇಷನಿನ ಪದಾಧಿಕಾರಿಗಳಾದ ಮಹಮ್ಮದ್ ಪೆಲ್ತಡ್ಕ , ಎ.ಟಿ. ಹಸನ್, ಡಿ.ಎಂ.ಅಬ್ದುಲ್ಲಾ ಹಾಗೂ ನಿರ್ದೇಶಕರಾದ ಮಹಮ್ಮದ್ ಮಿರ್ಷಾದ್ ಉಪಸ್ಥಿತರಿದ್ದರು. ಅಧ್ಯಕ್ಷ ಜಾಫರ್ ಸಾಧಿಕ್ ಕುಂಭಕ್ಕೋಡ್ ಸ್ವಾಗತಿಸಿದರು.