ಸುಳ್ಯ:ಸುಳ್ಯದಲ್ಲಿ ಕಳೆದ 50 ವರ್ಷಗಳಿಂದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡಾ ಮತ್ತು ಕಲಾ ಕ್ಷೇತ್ರದಲ್ಲಿ ಯಶಸ್ವಿ ಸಂಘಟಕರಾಗಿ, ಹಾಗೂ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಇದರ ಸದಸ್ಯರಾಗಿ, ಅಧ್ಯಕ್ಷರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ಸುಳ್ಯ ದಸರಾ ಉತ್ಸವದ ಯಶಸ್ಸಿಗೆ ಕೈಜೋಡಿಸುತ್ತಿರುವ ಗೋಕುಲ್ದಾಸ್ ಸುಳ್ಯ ಅವರು 2024-25ನೇ ಸಾಲಿನ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ
ಪುರಸ್ಕೃತರಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಸುವ ಬಗ್ಗೆ ಪೂರ್ವ ಭಾವಿ ಸಭೆಯು ಇಂದು ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಅಭಿನಂದನಾ ಸಮಿತಿ ರಚಿಸಲಾಯಿತು. ಡಿ. 28ರಂದು ಸುಳ್ಯದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸ್ನೇಹಿತರು ಮತ್ತು ಗೋಕುಲ್ ದಾಸ್ ಅವರ ಹಿತೈಷಿಗಳ ಸಹಕಾರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಭಿನಂದನಾ ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು, ಪ್ರಧಾನ ಕಾರ್ಯದರ್ಶಿಯಾಗಿ ಭವಾನಿಶಂಕರ್ ಕಲ್ಮಡ್ಕ,
ಕೋಶಾಧಿಕಾರಿಯಾಗಿ ಬೂಡು ರಾಧಾಕೃಷ್ಣ ರೈ, ಉಪಾಧ್ಯಕ್ಷರುಗಳಾಗಿ ನಾರಾಯಣ ಕೇಕಡ್ಕ, ದಿನೇಶ್ ಮಡಪ್ಪಾಡಿ, ಎಸ್. ಸಂಶುದ್ದೀನ್, ನವೀನ್ ಚಂದ್ರ ಬೆಂಗಳೂರು, ಎಂ ಕೆ ಸತೀಶ್, ತೀರ್ಥರಾಮ ಜಾಲ್ಸೂರು, ಶೈಲೇಶ್ ಅಂಬೇಕಲ್ಲು, ಹರೀಶ್ ರೈ ಉಬರಡ್ಕ, ಅಶೋಕ್ ಪೀಚೆ ಮನೆ, ಚಂದ್ರಶೇಖರ್ ನಂಜೆ ಗೌರವ ಸಲಹೆಗಾರರಾಗಿ ಎನ್ ಜಯಪ್ರಕಾಶ್ ರೈ, ಎನ್ ಎ ರಾಮಚಂದ್ರ, ಪಿ ಸಿ ಜಯರಾಮ್, ಭರತ್ ಮುಂಡೋಡಿ, ಡಾ. ಲೀಲಾಧರ್, ಶ್ರೀಮತಿ ಶಶಿಕಲಾ ನೀರಬಿದಿರೆ, ಎಂ ವೆಂಕಪ್ಪ ಗೌಡ, ಜತೆ ಕಾರ್ಯದರ್ಶಿಗಳಾಗಿ ಸುನಿಲ್ ಕೇರ್ಪಳ, ಶಾಫಿ ಕುತ್ತಮೊಟ್ಟೆ, ಡೇವಿಡ್ ಧೀರಾ ಕ್ರಾಸ್ತ ಮಾಧ್ಯಮ ಕಾರ್ಯದರ್ಶಿಯಾಗಿ ಕೃಷ್ಣ ಬೆಟ್ಟ ಹಾಗೂ ಸಮಿತಿ ಸದಸ್ಯರಾಗಿ ಸತ್ಯಕುಮಾರ್ ಆಡಿಂಜ, ಶಶಿಧರ್ ಎಂ ಜೆ, ಸಚಿನ್ ರಾಜ್ ಶೆಟ್ಟಿ, ಜಬ್ಬಾರ್, ರಾಜು ಪಂಡಿತ್, ಕೆ. ಟಿ ಭಾಗೀಶ್, ಚಂದ್ರನ್ ಕೂಟೇಲು, ಅರುಣಾಚಲಂ ಕೂಟೆಲು, ಮಹೇಶ್ ಬೆಳ್ಳಾರ್ಕರ್, ವಿಜಯಕುಮಾರ್ ಆಲೆಟ್ಟಿ, ಧನುಷ್ ಕುಕ್ಕೇಟಿ, ಮಧುಸೂಧನ್ ಬೂಡು, ಮಂಜುನಾಥ್ ಮೇಸ್ತ್ರಿ ಬಳ್ಳಾರಿ, ಹರಿಶ್ಚಂದ್ರ ಪಂಡಿತ್, ರಾಮಚಂದ್ರ ಪೆಲ್ತಡ್ಕ, ಶುಭಕರ ನಾಯಕ್, ಚಂದ್ರಶೇಖರ ಪಂಡಿತ್, ಜೆ. ಕೆ ರೈ ಸುಳ್ಯ, ಮನಮೋಹನ ಪುತ್ತಿಲ, ಪದ್ಮನಾಭ ಹರ್ಲಡ್ಕ, ಚೇತನ್ ಕಜೆಗದ್ದೆ, ಯೂಸುಫ್ ಅಂಜಿಕಾರ್, ತಾಜುದ್ದೀನ್ ಅರಂತೋಡು, ಗುರುಸ್ವಾಮಿ ಬೀರಮಂಗಲ, ಭಾಸ್ಕರ ಪೂಜಾರಿ ಬಾಜಿನಡ್ಕ, ಆರತಿ ಪುರುಷೋತ್ತಮ್, ಸಂಧ್ಯಾ ಮಂಡೆಕೋಲು, ಪ್ರವೀಣ ರೈ ಮರುವಂಜ, ಶೀಲಾ ಕುರುಂಜಿ, ನಮಿತಾ ಹರ್ಲಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಶಶಿಧರ್ ಎಂ ಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿಶಂಕರ್ ಕಲ್ಮಡ್ಕ ವಂದಿಸಿದರು.