ಸುಳ್ಯ:ಸುಳ್ಯದ ಮಕ್ಕಳ ವಸ್ತ್ರಗಳ ಎಕ್ಸ್ಕ್ಲೂಸಿವ್ ಶೋರೂಂ ಗೋಕುಲಂ ಕಿಡ್ಸ್ ವೇರ್ ಆರ್ಥಿಕ ವರ್ಷಾಂತ್ಯ ಮತ್ತು ಯುಗಾದಿ ಪ್ರಯುಕ್ತ ಭರ್ಜರಿ ಆಫರ್ ಘೋಷಿಸಿದೆ. ಯುಗಾದಿ ಸಂಭ್ರಮ ಹೆಚ್ಚಿಸಲು ಗೋಕುಲಂನಲ್ಲಿ ವಿಶೇಷ ದರ ಕಡಿತ ಮಾರಾಟ ಮಾಡಲಾಗುತಿದೆ.ಪ್ರತಿ 500 ರೂ ಮೇಲ್ಪಟ್ಟ ಖರೀದಿಯ ಮೇಲೆ ಶೇ.30 ದರ ಕಡಿತ ಮಾಡಿ ಮಾರಾಟ ಮಾಡಲಾಗುತ್ತದೆ. ಪ್ರತಿ 500 ರೂ ಕೆಳಗಿನ ಖರೀದಿಯ ಮೇಲೆ
ಶೇ.15 ದರ ಕಡಿತ ನೀಡಲಾಗುತ್ತಿದೆ. ಅಲ್ಲದೆ ಗಂಡು ಮಕ್ಕಳ ಎರಡು ಷರ್ಟ್ ಖರೀದಿಸಿದರೆ ಒಂದು ಷರ್ಟ್ ಉಚಿತ ನೀಡಲಾಗುತ್ತದೆ.
ಮಾರ್ಚ್ 18ರವರೆಗೆ ದರ ಕಡಿತ ಮಾರಾಟದ ಆಫರ್ ಲಭ್ಯವಿದೆ.
ಮಕ್ಕಳ ವೈವಿಧ್ಯಮಯ ವರ್ಣ ವಸ್ತ್ರಗಳಿಗೆ ಹೆಸರುವಾಸಿಯಾಗಿರುವ ಸುಳ್ಯದ ಮುಖ್ಯ ರಸ್ತೆ ಬದಿಯಲ್ಲಿ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಹವಾ ನಿಯಂತ್ರಿತ ವಿಶಾಲ ಶೋ ರೂಂ ಗೋಕುಲಂ ಮಳಿಗೆಯಲ್ಲಿ 0-16 ವಯಸ್ಸಿನವರೆಗಿನ ಎಲ್ಲಾ ಪ್ರಾಯದ ಮಕ್ಕಳಿಗೂ ಒದಗುವ ಆಕರ್ಷಕ ಬಣ್ಣ

ಹಾಗು ವಿನ್ಯಾಸದ ವಸ್ತ್ರಗಳ ಅಪೂರ್ವ ಸಂಗ್ರವೇ ಇದೆ. ಹಾಗು ಮಾಡರ್ನ್ ಬಟ್ಟೆಗಳ ವರ್ಣಮಯ ಸಂಗ್ರಹವೇ ಬಂದಿದೆ. ಟಿ ಷರ್ಟ್ಸ್, ಕಾಟನ್ ಪ್ಯಾಂಟ್ಸ್, ಜೀನ್ಸ್ ಪ್ಯಾಂಟ್, ಕ್ಯಾಶುವಲ್ ವೆಯರ್ಗಳು, ಶಾರ್ಟ್ ಫ್ರಾಕ್ ಗೌನ್ಗಳ ಮನಸ್ಸಿಗೆ ಒಪ್ಪುವ ವೈವಿಧ್ಯಮಯ ಸಂಗ್ರಹದ ರಾಶಿಯೇ ಇದೆ.
ವಿವಿಧ ಕಂಪೆನಿಗಳ ಅತ್ಯಾಕರ್ಷಕ ವರ್ಣಮಯ ಬ್ರಾಂಡೆಡ್ ಮಕ್ಕಳ ಉಡುಪುಗಳ ಅದ್ಭುತ ಲೋಕವೇ ಇಲ್ಲಿ ತೆರೆದಿದೆ.

ಗುಣಮಟ್ಟದ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ನೀಡುವ ಮೂಲಕ ಗೋಕುಲಂ ಕೆಲವೇ ತಿಂಗಳಲ್ಲಿ ಬ್ರಾಂಡ್ ಆಗಿ ರೂಪುಗೊಂಡಿದೆ.ಗ್ರಾಹಕರ ವಾಹನ ಪಾರ್ಕ್ ಮಾಡಲು ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಇದೆ. ಇದೀಗ ಯುಗಾದಿ ಸಂಭ್ರಮ ಹೆಚ್ಚಿಸಲು ಭರ್ಜರಿ ಆಫರ್ ಘೋಷಿಸಿ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ತಡವೇಕೆ ನಿಮ್ಮ ಮಕ್ಕಳ ಸಂತಸವನ್ನು ಹೆಚ್ಚಿಸಲು ವಸ್ತ್ರಗಳ ಈ ನಂದ ಗೋಕುಲಕ್ಕೆ ಇಂದೇ ಭೇಟಿ ಕೊಡಿ..