ಅಹಮದಾಬಾದ್:ನಾಯಕ ಶುಭಮನ್ ಗಿಲ್ ಬಿರುಸಿನ ಅರ್ಧಶತಕದ (89*) ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ. ಆ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ 200 ರನ್ಗಳ ಬೃಹತ್ ಗುರಿ ಒಡ್ಡಿದೆ. ಪಂಜಾಬ್ ಬೌಲರ್ಗಳನ್ನು
ಸಮರ್ಥವಾಗಿ ಎದುರಿಸಿದ ಗಿಲ್ ಆಕರ್ಷಕ ಅರ್ಧಶತಕ ಗಳಿಸಿದರು. 31 ಎಸೆತಗಳಲ್ಲಿ ಪ್ರಸಕ್ತ ಸಾಲಿನ ಐಪಿಎಲ್ನ ಮೊದಲ ಅರ್ಧಶತಕ ಪೂರ್ಣಗೊಳಿಸಿದ ಗಿಲ್ 48 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 89 ರನ್ ಗಳಿಸಿದರು.ಅವರಿಗೆ ಕೇನ್ ವಿಲಿಯಮ್ಸನ್ (26) ಹಾಗೂ ಸಾಯ್ ಸುದರ್ಶನ್ (33) ಉಪಯುಕ್ತ ನೆರವು ನೀಡಿದರು.
ಉಳಿದಂತೆ ವೃದ್ಧಿಮಾನ್ ಸಹಾ 11 ಹಾಗೂ ವಿಜಯ್ ಶಂಕರ್ 8 ರನ್ ಗಳಿಸಿದರು. ಕೊನೆಯ ಹಂತದಲ್ಲಿ ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ ಅಜೇಯ 23 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಮಿಂಚಿದರು. ಗುಜರಾತ್ ಪರ ಕಗಿಸೋ ರಬಾಡ ಎರಡು ವಿಕೆಟ್ ಗಳಿಸಿದರು.