ಅಹಮ್ಮದಾಬಾದ್: ತನ್ನ ಅದ್ಭುತ ಫಾರ್ಮ್ ಮುಂದುವರಿಸಿರುವ ಶುಭ್ಮನ್ ಗಿಲ್ ಸ್ಪೋಟಕ ಶತಕದ ನೆರವಿನಿಂದ ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಪೇರಿಸಿತು.
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶುಭ್ಮನ್ ಗಿಲ್ ಕೇವಲ 60
ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗು 7 ಬೌಂಡರಿ ನೆರವಿನಿಂದ 129 ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಗಿಲ್ ಹಾಗೂ ವೃದ್ಧಿಮಾನ್ ಸಾಹ ಮೊದಲ ವಿಕೆಟ್ಗೆ 6.3 ಓವರ್ಗಳಲ್ಲಿ 54 ರನ್ ಬಾರಿಸಿದರೆ, ಗಿಲ್ ಹಾಗೂ ಸಾಯ್ ಸುದರ್ಶನ್ ಎರಡನೇ ವಿಕೆಟ್ಗೆ 10.4 ಓವರ್ಗಳಲ್ಲಿ 138 ರನ್ ಸೇರಿಸಿದರು. ವೃದ್ಧಿಮಾನ್ ಸಾಹ 16 ಎಸೆತಗಳಲ್ಲಿ 18 ರನ್ ಗಳಿಸಿದರೆ, ಸಾಯ್ ಸುದರ್ಶನ್ 31 ಎಸೆತಗಳಲ್ಲಿ 43 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 28 ರನ್ ಗಳಿಸಿದರು. ಮಳೆಯಿಂದಾಗಿ ಟಾಸ್ 15 ನಿಮಿಷ ತಡವಾಯಿತು. ಈ ಪಂದ್ಯದಲ್ಲಿ ಗೆದ್ದರಷ್ಟೇ ಫೈನಲ್ಗೆ ಲಗ್ಗೆ ಇಡಲು ಸಾಧ್ಯವಾಗಲಿದೆ. ನಿರ್ಣಾಯಕ ಪಂದ್ಯದಲ್ಲಿ
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೂಲೆ ಮೂಲೆಗೆ ಸಿಕ್ಸರ್, ಬೌಂಡರಿಗಳ ಸುರಿ ಮಳೆಗೈದ ಗಿಲ್ ನೆರೆದ ಕ್ರೀಡಾಭಿಮಾನಿಗಳಿಗೆ ರಸಧೌತಣವನ್ನೇ ಉಣ ಬಡಿಸಿದರು.