ಕಲ್ಲಪಳ್ಳಿ:ಕಲ್ಲಪ್ಪಳ್ಳಿ, ಕಮ್ಮಾಡಿ ಸೇರಿಸಂತೆ ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದ ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕೆ ಹೊಸ ಬಿಎಸ್ಎನ್ಎಲ್ ಟವರ್ ಮಂಜೂರಾಗಿದೆ. ಇದಕ್ಕಾಗಿ ಗರುಗುಂಜದಲ್ಲಿ ಹೊಸ ಟವರ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಸ್ಥಳ ಅಳತೆ ಮಾಡಿ ಲೊಕೇಶನ್
ಪ್ಲಾನ್ ತಯಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ, ಸ್ಥಳೀಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಈ ನೂತನ ಟವರ್ ಸಂಪೂರ್ಣ ಅಟೋ ಆಪರೇಟಿವ್ 4G ಆಗಿದ್ದು, ಈ ಹಂತದಲ್ಲಿ ಕಲ್ಲಪ್ಪಳ್ಳಿಯ ಟವರ್ ಕೂಡ 4G ಅಟೋ ಆಪರೇಟಿವ್ ಮೇಲ್ದರ್ಜೆಗೇರಲಿದೆ ಎಂದು ತಿಳಿದು ಬಂದಿದೆ.
ಕಮ್ಮಾಡಿ ಟವರ್ ನಿರ್ಮಾಣ ದಿಂದ, ಕಮ್ಮಾಡಿ, ನಿಡ್ಯಮಲೆ, ಕುಂಬಳಚೇರಿ, ಕೂರ್ನಡ್ಕ, ಪೆರುಮುಂಡ, ಸುತ್ತ ಮುತ್ತಲಿನ ಪ್ರದೇಶಗಳಿಗೆ ನೆಟ್ವರ್ಕ್ ಸಿಗುವ ನಿರೀಕ್ಷೆ ಇದೆ.