ಸುಬ್ರಹ್ಮಣ್ಯ: ಗಾಂಗೇಯ ಕ್ರಿಕೇಟರ್ಸ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ದಿ.ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥ ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ೨೦ ತಂಡಗಳ ಗಾಂಗೇಯ ಟ್ರೋಫಿ ಕ್ರಿಕೆಟ್ ಪಂದ್ಯಾಟ- ೨೦೨೩ ನ್ನು ಗ್ರಾ.ಪಂ.ಸದಸ್ಯ ಮತ್ತು ಗಾಂಗೇಯ ತಂಡದ ಹಿರಿಯ ಆಟಗಾರ ರಾಜೇಶ್ ಎನ್.ಎಸ್ಉದ್ಘಾಟಿಸಿದರು.
ಕ್ರಿಕೆಟ್ ಆಡುವ ಮೂಲಕ ಪಂದ್ಯಾಟಕ್ಕೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಚಾಲನೆ ನೀಡಿದರು. ಗಾಂಗೇಯ ಕ್ರಿಕೇರ್ಸ್ನ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಿದ್ದರು.ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ಶೆಟ್ಟಿಗಾರ್, ರೋಟರಿ ಕ್ಲಬ್ನ ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್, ಗಾಂಗೇಯದ ಹಿರಿಯ ಆಟಗಾರ ಮತ್ತು ಕಲಾವಿದ ಯಶೋಧಕೃಷ್ಣ ನೂಚಿಲ,
ತಂಡದ ನಾಯಕ ಮಹೇಶ್ ಕುಮಾರ್ ಎಸ್, ನಿರ್ಣಾಯಕರಾದ ಹರೀಶ್ ಪಡೀಲ್, ಮೋಹನ್ ಯಯ್ಯಾಡಿ, ಸುರೇಶ್ ಬೆದ್ರ, ನಿರ್ಣಾಯಕರಾದ ಸುಕುಮಾರ್ ಬೆಂಗಳೂರು, ಸತೀಶ್ ಮಂಗಳೂರು, ಗೋಪಿ ಮಂಗಳೂರು ಮುಖ್ಯಅತಿಥಿಗಳಾಗಿದ್ದರು. ಗಾಂಗೇಯ ತಂಡದ ಮಾಜಿ ಕಪ್ತಾನ ಮತ್ತು ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ ಸ್ವಾಗತಿಸಿದರು. ಸುಕುಮಾರ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.