ಸುಳ್ಯ:ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ 41ನೇ ವರ್ಷದ ಗಣೇಶೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಸೆ.7ರಂದು ಆರಂಭಗೊಂಡು ವಿವಿಧ ಕಾರ್ಯಕ್ರಮಗಳೊಂದಿಗೆ 3 ದಿನಗಳ ನಡೆದ ಗಣೇಶೋತ್ಸವದ ಸಮಾಪನದ ಅಂಗವಾಗಿ ಸಾಂಸ್ಕೃತಿಕ ಸಂಘದ ವಸಂತ ಕಟ್ಟೆಯಿಂದ ಅದ್ದೂರಿ ಶೋಭಾಯಾತ್ರೆ ಆರಂಭಗೊಂಡಿತು. ಚೆಂಡೆ, ವಾದ್ಯ ಘೋಷಗಳು ಶೋಭಾಯಾತ್ರೆಗೆ
ಮೆರುಗು ನೀಡಿತು. ಹಳೆಗೇಟಿನಿಂದ ಹೊರಟು ಸುಳ್ಯ ನಗರದಲ್ಲಿ ಸಂಚರಿಸಿದ ಶೋಭಾಯಾತ್ರೆಯು ಹಿಂತಿರುಗಿ ಬಂದು ಹಳೆಗೇಟಿನಿಂದ ಕೊಡಿಯಾಲಬೈಲು ರಸ್ತೆಯಲ್ಲಿ ಪ್ರಯಾಣಿಸಿತು. ಅಲ್ಲಲ್ಲಿ ನೂರಾರು ಮಂದಿ ಜಮಾಯಿಸಿ ಶೋಭಾಯಾತ್ರೆ ವೀಕ್ಷಿಸಿದರು. ಹಣ್ಣು ಕಾಯಿ ನಡೆಸುವ ಮೂಲಕ ಸಾರ್ವಜನಿಕರು ಶೋಭಾಯಾತ್ರೆಯನ್ನು ಸ್ವಾಗತಿಸಿದರು. ಕಿವಿಗಪ್ಪಳಿಸುವ ಸಿಡಿಮದ್ದಿನ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಶೋಭಾಯಾತ್ರೆಯ ಬಳಿಕ ಗಣೇಶ ವಿಗ್ರಹವನ್ನು ಬ್ರಹ್ಮರಗಯದಲ್ಲಿ ಜಲಸ್ತಂಭನಗೊಳಿಸಲಾಯಿತು.
ಮೂರು ದಿನಗಳ ಗಣೇಶೋತ್ಸವದ ಅಂಗವಾಗಿ ವಸಂತ ಕಟ್ಟೆಯಲ್ಲಿವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮ, ಭಜನೆ ಮತ್ತಿತರ ಕಾರ್ಯಕ್ರಮಗಳು ನಡೆಯಿತು. ಪುರೋಹಿತ ನಟರಾಜ ಶರ್ಮ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು.
ಹಳೆಗೇಟು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಿ ಶ್ರೀನಿವಾಸ್ ರಾವ್, ಉಪಾಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಕಾರ್ಯದರ್ಶಿ ಶಿವನಾಥ್ ರಾವ್ ಹಳೆಗೇಟು, ಉಪ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಕೋಶಾಧಿಕಾರಿ ಚಿತ್ತರಂಜನ್, ಕಾರ್ಯಕ್ರಮದ
ಸಂಚಾಲಕರಾದ ಜ್ಞಾನೇಶ್ವರ್ ಶೇಟ್,ದಿವಾಕರ ತಿಮ್ಸನ್, ರಾಮಕೃಷ್ಣ ಆಳಂಕಲ್ಯ,ಗೌತಮ್ ಭಟ್, ಸಚಿನ್ ರಾವ್,ಧನಂಜಯ ಪಂಡಿತ್,ಕಿಶನ್ ಕುಮಾರ್, ಗಣೇಶ್ ಕೊಯಿಂಗೋಡಿ, ಶ್ರೀಜಿತ್, ವಿಜಯ್ ಕುಮಾರ್, ಕಮಲಾಕ್ಷ ಆಚಾರ್ಯ,ನವೀನ್ ರಾವ್, ರಾಧಾಕೃಷ್ಣ ರಾವ್, ದಿನೇಶ್ ಬೆಟ್ಟಂಪ್ಪಾಡಿ, ಜನಾರ್ಧನ ಬೆಟ್ಟಂಪ್ಪಾಡಿ,ಭುವನೇದ್ರ ಶೇಟ್,ಶಿವ ಕುಮಾರ್ ಬೆಟ್ಟಂಪ್ಪಾಡಿ,ಗಣೇಶ್ ಬೆಟ್ಟಂಪ್ಪಾಡಿ,ಸುನಿಲ್ ಮಾಣಿ ಬೆಟ್ಟು, ಹಾಗೂ ಹಳೆಗೇಟು ಶಿವಾಜಿ ಯುವ ವೃಂರದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ನೂರಾರು ಭಕ್ತಾಧಿಗಳು ಉಪಸ್ಥಿತರಿದ