ಸುಳ್ಯ:ಮುಹಿಯುದ್ದೀನ್ ಜುಮಾ ಮಸ್ಜಿದ್ ಗಾಂಧಿನಗರ ಸುಳ್ಯ ಇದರ ಆಶ್ರಯದಲ್ಲಿ ಅಲ್ ಇಖ್ವಾನ್ ಮಯ್ಯಿತ್ ಪರಿಪಾಲನಾ ಸಮಿತಿ ಸಹಭಾಗಿತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಗಾಂಧಿನಗರ ಜುಮಾ ಮಸೀದಿ ವಠಾರದಲ್ಲಿ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಮಯ್ಯಿತ್ ಪರಿಪಾಲನಾ ಕಟ್ಟಡದ ಲೋಕಾರ್ಪಣೆ ಅಂಗವಾಗಿ ಕಾರ್ಯಾಗಾರ ನಡೆಯಿತು ಜಮಾಲ್ ಸಖಾಫಿ ಉದ್ಘಾಟಿಸಿದರು.ಮಯ್ಯಿತ್ ಪರಿಪಾಲನಾ
ಕಟ್ಟಡವನ್ನು ಸುಳ್ಯ ತಾಲೂಕು ಜಮೀಯತುಲ್ ಉಲಮಾ ಅಧ್ಯಕ್ಷ ಅಸ್ಸಯ್ಯದ್ ಕುಂಞಕೋಯ ತಂಗಳ್ ಲೋಕಾರ್ಪಣೆ ಮಾಡಿದರು. ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು. ಮೊಗರ್ಪಣೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಫುಡ್ ನಾಮಫಲಕ ಅನಾವರಣ ಗೊಳಿಸಿದರು ಗಾಂಧಿನಗರ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ದುವಾ ಪ್ರಾರ್ಥನೆಗೈದರು.
ಗಾಂಧಿನಗರ ಮಸೀದಿಯ ನಿಕಟಪೂರ್ವ ಮುದರ್ರಿಸರಾದ ಶರಫುದ್ದೀನ್ ಸಅದಿ ಶುಭಾಶಂಸನೆಗೈದರು ವೇದಿಕೆಯಲ್ಲಿ ಪೇರಡ್ಕ ಜುಮ್ಮಾಮಸೀದಿ ಗೌರವಾಧ್ಯಕ್ಷ ಟಿ.ಎಂ. ಶಹೀದ್,

ಎಐಕೆಎಂಸಿಸಿ ಜಿಲ್ಲಾ ಖಜಾಂಜಿ ಕತ್ತರ್ ಇಬ್ರಾಹಿಂ ಹಾಜಿ, ಪೆರಾಜೆ ಜಮಾ ಮಸೀದಿ ಅಧ್ಯಕ್ಷ ಶಹೀದ್ ಕಲ್ಚರ್ಪೆ, ಇಖ್ರಾ ಜಾಮಿಯ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಜಲೀಲ್,ಜಟ್ಟಿಪ್ಪಳ್ಳ ಬುಸ್ತಾನುಲ್ ಉಲೂo ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಎಸ್ಎಎಸ್,ಕುಂಭಕ್ಕೋಡ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷರುಗಳಾದ ಹಾಜಿ ಆದo ಕಮ್ಮಾಡಿ, ಹಾಜಿ ಕೆ. ಬಿ. ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್, ಉಪಾಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ಖಜಾಂಚಿ ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಹಾಜಿ ಎಸ್. ಎ. ಹಮೀದ್, ಕೆ. ಎಸ್. ಉಮ್ಮರ್, ಹಮೀದ್ ಬೀಜಕೊಚ್ಚಿ,ಜಿ. ಎಂ. ಇಬ್ರಾಹಿಂ ಶಿಲ್ಪಾ, ಇಸ್ಮಾಯಿಲ್ ಹಾಜಿ,ನಗರ ಪಂಚಾಯಿತಿ ಸದಸ್ಯ ಶರೀಫ ಕಂಠಿ, ಅಲ್ಇಖ್ವಾನ್ ಕಮಿಟಿ ಸಂಚಾಲಕರ ಖಾದರ್ ಜಟ್ಟಿಪ್ಪಳ್ಳ ಮೊದಲಾದವವರು ಉಪಸ್ಥಿತರಿದ್ದರು .ಲತೀಫ್ ಸಖಾಫಿ ಸ್ವಾಗತಿಸಿ ವಂದಿಸಿದರು