ಸುಳ್ಯ:ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಗಾಂಧಿ ನಗರ ಸುಳ್ಯ ಇದರ ಆಶ್ರಯದಲ್ಲಿ ಕಳೆದ ಎರಡು ವರ್ಷಗಳಿಂದ ಅಲ್ ಹಾಜ್ ಶರಫುದ್ದೀನ್ ಸಅದಿ ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವ ದರ್ಸ್ ವಾರ್ಷಿಕ ಸಮಾರೋಪ ಸಮಾರಂಭವು ದರ್ಸ್ ಹಾಲ್ ನಲ್ಲಿ ಜರಗಿತು.ಅಧ್ಯಕ್ಷತೆಯನ್ನು ಜಮಾಅತ್ ಸಮಿತಿ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಾಫ ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು
ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ನೆರವೇರಿಸಿದರು. ತರ್ಬಿಯತ್ ಇಸ್ಲಾಂ ಜಮಾಅತ್ ಕಮಿಟಿ ಉಪಾಧ್ಯಕ್ಷ ಮಹಮ್ಮದ್ ಕೆಎಂಎಸ್ ಪ್ರಧಾನ ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್,ಕೋಶಾಧಿಕಾರಿ ಮುಹಿಯದ್ದೀನ್ ಫ್ಯಾನ್ಸಿ, ಸಯ್ಯದ್ ಜೈನುಲ್ ಆಬಿದೀನ್ ತಂಗಳ್ ಜಮಾಅತ್ ಸಮಿತಿ ನಿರ್ದೇಶಕರುಗಳಾದ ಕೆ. ಎಸ್. ಉಮ್ಮರ್, ಹಾಜಿ ಎಸ್. ಎಂ. ಹಮೀದ್, ಎಸ್. ಎ. ಹಮೀದ್ ಹಾಜಿ ಹಾಜಿ ಅಬ್ದುಲ್ ಕಾದರ್ ಆಜಾದ್, ಹಾಜಿ ಐ.ಇಸ್ಮಾಯಿಲ್, ಹಮೀದ್ ಬೀಜಕೊಚ್ಚಿ, ಜಿ. ಎಂ. ಇಬ್ರಾಹಿಂ ಶಿಲ್ಪಾ,ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್,ಪ್ರಧಾನ ಕಾರ್ಯದರ್ಶಿ ಬಿ.ಎಂ. ಹನೀಫ್, ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷ ಹಾಜಿ ಕೆ. ಬಿ. ಮಹಮ್ಮದ್ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾ ರ್ಸ್, ಎಂ. ಜೆ. ಎಂ ಮಾಜಿ ನಿರ್ದೇಶಕರಾದ ಹಾಜಿ ಅಬ್ದುಲ್ ಹಮೀದ್ ಜನತಾ, ಹಾಜಿ ಅಬ್ದುಲ್ ಗಫಾರ್ ಮೊದಲಾದವರು ಉಪಸ್ಥಿತರಿದ್ದರು. ಉಸ್ತಾದರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.ಎಲ್ಲಾ ಮುತಅಲ್ಲಿo ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತ.ನಾರಿಯತ್ ಸ್ವಲಾತ್ ವಾರ್ಷಿಕ ಮತ್ತು ಕೂಟ್ ಪ್ರಾರ್ಥನೆ ಯೊಂದಿಗೆ ಸಮಾರಂಭ ಸಂಪನ್ನಗೊಂಡಿತು.