ಸುಳ್ಯ: ಎಂಎಲ್ಸಿ ಮಂಜುನಾಥ ಭಂಡಾರಿಯವರ ಅನುದಾನದಲ್ಲಿ ಸುಳ್ಯ ಗಾಂಧಿನಗರ ಗಾಂಧಿ ಪಾರ್ಕ್ ಬಳಿ ರಿಕ್ಷಾ ಚಾಲಕರ ಅಟೋ ತಂಗುದಾನ ಕಾಮಗಾರಿ ನಡೆಯುತ್ತಿದೆ. ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯು
ಕೊನೆಯ ಹಂತದಲ್ಲಿದೆ. ರಿಕ್ಷಾ ತಂಗುದಾಣ ಉದ್ಘಾಟನೆಯನ್ನು ಗಾಂಧಿಜಯಂತಿಯಂದು ನಡೆಸುವ ಬಗ್ಗೆ ಯೋಚಿಸಲಾಗುತಿದೆ ಎಂದು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾವೂರು ವಾರ್ಡ್ ಬೂತ್ ಕಮಿಟಿ ಅಧ್ಯಕ್ಷ ಹನೀಫ್ ಬೀಜಕೊಚ್ಚಿ ಹಾಗೂ ಜಗದೀಶ್ ಕಾಯರ್ತೋಡಿ ಉಪಸ್ಥಿತರಿದ್ದರು.





