ಸುಳ್ಯ:ಸತ್ಕಾರ್ಯ, ಸಹಾಯ, ಸೌಹಾರ್ದತೆ ಮತ್ತು ಸಹೋದರತೆಗೆ ಅಡಿಪಾಯ.ಪವಿತ್ರ ರಂಜಾನ್ ತಿಂಗಳ ಆಶಯವಾದ ದಾನ ಧರ್ಮ ಮತ್ತು ಬಡವರಿಗೆ ಸಹಾಯ ಮಾಡುವುದು ಸೌಹಾರ್ದತೆ ಮತ್ತು ಸಹೋದರತೆ ಯಿಂದ ಬದುಕಲು ಪ್ರೇರಣೆ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ತೆಕ್ಕಿಲ್ ಹೇಳಿದರು. ಗಾಂಧಿನಗರ ಗಾಂಧಿಪಾರ್ಕ್ ಬಳಿ
ಜರಗಿದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು
ಇದೆ ಸಂದರ್ಭದಲ್ಲಿ ಜನಪ್ರತಿನಿದಿಗಳು, ಆಟೋ ಚಾಲಕರು, ಕಾರ್ಮಿಕ ಸಂಘಟನೆಯ ಸದಸ್ಯರು ಮತ್ತು ಸಾರ್ವಜನಿಕರ ಪರವಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂಡ ಟಿ. ಎಂ. ಶಾಹಿದ್ ತೆಕ್ಕಿಲ್ ರವರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿ ಅಲ್ಪ ಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ಗ್ಯಾರಂಟೀ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೋ, ರಾಜು ಪಂಡಿತ್, ಆಮ್ ಆದ್ಮಿ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಖಲಂದರ್ ಎಲಿಮಲೆ, ಗಾಂಧಿನಗರ ಫಿಶ್ ಮಾರ್ಕೇಟ್ ಮಾಲಕರಾದ ಹಮೀದ್, ಪ್ರಮುಖರಾದ ರಾಧಾಕೃಷ್ಣ ಪರಿವಾರಕಾನ, ಜಯಪ್ರಕಾಶ್ ಕಲ್ಲಪಳ್ಳಿ, ಹನೀಫ್ ಬೀಜದಕೊಚ್ಚಿ, ಲತೀಫ್ ಮತ್ತಿತರರು ಉಪಸ್ಥಿತರಿದ್ದರು.