ಸುಳ್ಯ:ಸುಳ್ಯದ ಗಾಂಧಿ ಚಿಂತನೆ ವೇದಿಕೆಯ ವತಿಯಿಂದ ಗಾಂಧಿಜಯಂತಿ ಆಚರಣೆ ಸುಳ್ಯದಲ್ಲಿ ನಡೆಯಿತು. ಇದರ ಅಂಗವಾಗಿ ಸುಳ್ಯ ನಗರದಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಿತು.ಜ್ಯೋತಿ ವೃತ್ತದಿಂದ ಗಾಂಧಿನಡಿಗೆ ಆರಂಭಗೊಂಡು ಗಾಂಧಿನಗರದ ತನಕ ಗಾಂಧೀ ನಡಿಗೆ ನಡೆಯಿತು.ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ
ಸಭಾ ಕಾರ್ಯಕ್ರಮ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ನಿವೃತ್ತ ಪ್ರಾಂಶುಪಾಲರಾದ ದಾಮೋದರ ಗೌಡ, ಹಿರಿಯರಾದ ಎಸ್.ಎಂ.ಬಾಪೂ ಸಾಹೇಬ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಅತಿಥಿಗಳಾಗಿದ್ದರು.ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಸ್ಥಾಪಕ ಸಂಚಾಲಕ ಡಾ.ಸುಂದರ ಕೇನಾಜೆ ಸ್ವಾಗತಿಸಿ, ಸಂಚಾಲಕರಾದ ಶಂಕರ ಪೆರಾಜೆ ವಂದಿಸಿ, ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಂಚಾಲಕರಾದ ಚಂದ್ರಶೇಖರ ಪೇರಾಲು, ಶರೀಫ್ ಕಂಠಿ, ಕೆ.ಆರ್.ಗೋಪಾಲಕೃಷ್ಣ, ಪ್ರಮುಖರಾದ ಡಾ.ಲೀಲಾಧರ್ ಡಿ.ವಿ, ಡಾ.ಎನ್.ಎ.ಜ್ಞಾನೇಶ್, ಕೆ.ಪಿ.ಜಾನಿ ಕಲ್ಲುಗುಂಡಿ, ಕೇಶವ ಅಡ್ತಲೆ, ಕೆ.ಟಿ.ವಿಶ್ವನಾಥ್, ಭಾಸ್ಕರನ್ ನಾಯರ್, ಸಿ.ಎಚ್.ಪ್ರಭಾಕರನ್, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ್, ರಾಜು ಪಂಡಿತ್, ಶಾಫಿ ಕುತ್ತಮೊಟ್ಟೆ, ಧೀರಾ ಕ್ರಾಸ್ತಾ, ರಿಯಾಝ್ ಕಟ್ಟೆಕ್ಕಾರ್, ದೊಡ್ಡಣ್ಣ ಬರೆಮೇಲು, ನಂದರಾಜ ಸಂಕೇಶ, ಕೇಶವ ಸಿ.ಎ, ಸಂಜೀವ ಕುದ್ಪಾಜೆ, ರಾಧಾಕೃಷ್ಣ ಪರಿವಾರಕಾನ ಮಂಜುನಾಥ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು.












