ಸುಳ್ಯ:ಗಾಂಧಿಚಿಂತನ ವೇದಿಕೆಯ ನೇತೃತ್ವದಲ್ಲಿ
ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅ. 2ರಂದು ಸುಳ್ಯ ನಗರದಿಂದ ಕೊಡಿಯಾಲಬೈಲಿನಲ್ಲಿರುವ ಗಾಂಧಿವನದವರೆಗೆ ಗಾಂಧಿ ನಡಿಗೆ ನಡೆಯಿತು.ನಗರದ ಮುಖ್ಯ ರಸ್ತೆಯ ಬದಿಯಲ್ಲಿರುವ ಶ್ರೀಹರಿ ಕಾಂಪ್ಲೆಕ್ಸ್ ಎದುರು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಅವರು ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ
ಹಾಗೂ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಈರಯ್ಯ ದುಂತೂರು ಅವರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುವುದರ ಮೂಲಕ ಗಾಂಧಿ ನಡಿಗೆಗೆ ಚಾಲನೆ ನೀಡಿದರು.ಗಾಂಧಿ ನಡಿಗೆ ಕಾರ್ಯಕ್ರಮವು ಬಸ್ ನಿಲ್ದಾಣದಲ್ಲಿರುವ ಕುರುಂಜಿ ಪ್ರತಿಮೆಗೆ ಒಂದು ಸುತ್ತು ಹಾಕಿ ಬಳಿಕ, ಕೊಡಿಯಾಲಬೈಲಿನಲ್ಲಿರುವ ಗಾಂಧಿ ವನದವರೆಗೆ ಮೆರವಣಿಗೆ ಸಾಗಿತು. ಗಾನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಚಂದ್ರ ಗೌಡ ಗಾಂಧಿ ಚಿಂತನ ಉಪನ್ಯಾಸ ನಡೆಯಿತು. ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ಬಾಳ್ ನೇತೃತ್ವದಲ್ಲಿ ಕಾಲ್ನಡಿಗೆ ನಡೆಯಿತು
ಬಳಿಕ ಗಾಂಧಿ ವನದಲ್ಲಿರುವ 1500 ಗಿಡಗಳಿಗೆ ಗೊಬ್ಬರ ಹಾಕುವ ಕಾರ್ಯಕ್ರಮ ಸಾಮಾಜಿಕ ಅರಣ್ಯ ಇಲಾಖೆ ಮತ್ತು ವಲಯಾರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಯಿತು.ದಾರಿ ಮಧ್ಯೆ ಅಲ್ಲಲ್ಲಿ ಗಾಂಧೀಜಿಯ ಭಾವಚಿತ್ರಕ್ಕೆ ಸಂಘ ಸಂಸ್ಥೆಗಳ ಸದಸ್ಯರು, ಪುಟಾಣಿ ಮಕ್ಕಳು ಪುಷ್ಪಾರ್ಚನೆ ಮಾಡಿ ಗಾಂಧಿ ನಡಿಗೆಗೆ ಶುಭ ಕೋರಿದರು.