ಸುಳ್ಯ:ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತು.ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ವಹಿಸಿದ್ದರು ಸುಳ್ಯ ನಗರ
ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಕೆ. ಪಿ. ಜೋನಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ಶಶಿಧರ್, ಪಕ್ಷದ ಮುಖಂಡರುಗಳಾದ ಆನಂದ ಬೆಳ್ಳಾರೆ,ಸಚಿನ್ ರಾಜ್ ಶೆಟ್ಟಿ, ಮಂಜುನಾಥ್ ಮಡ್ತಿಲ, ಗಣೇಶ್ ನಾಗಪಟ್ಣ, ಇಬ್ರಾಹಿಂ ಜಯನಗರ ಮೊದಲಾದವರು ಉಪಸ್ಥಿತರಿದ್ದರು












