ಸುಳ್ಯ:ಗಾನಸಿರಿ ಕಲಾಕೇಂದ್ರ ಪುತ್ತೂರು ಇದರ ಸುಳ್ಯ ಶಾಖೆಯ ವಾರ್ಷಿಕ ಹಬ್ಬ ‘ನಾದ ನಿನಾದ-2024’ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಕಲಾ ವೇದಿಕೆಯಲ್ಲಿ ನಡೆಯಿತು.ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷ ವಿಜಯ ಕುಮಾರ್ ಉಬರಡ್ಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು
ಉದ್ಘಾಟಿಸಿ ಶುಭ ಹಾರೈಸಿದರು. ಖ್ಯಾತ ಗಾಯಕರು ಹಾಗೂ ಗಾನಸಿರಿ ಕಲಾ ಕೇಂದ್ರದ ಮುಖ್ಯಸ್ಥರೂ ಆದ ಡಾ.ಕಿರಣ್ ಕುಮಾರ್, ಗಾನಸಿರಿ ಸಹಶಿಕ್ಷಕಿ, ಶ್ರೀಲಕ್ಷ್ಮಿ, ಹಿಮ್ಮೇಳ ಕಲಾವಿದರಾದ ಡಾ . ದಿನೇಶ್ ರಾವ್, ಸುಹಾಸ್ ಹೆಬ್ಬಾರ್, ಸುದರ್ಶನ ಜ್ಯೋತಿಗುಡ್ಡೆ ಉಪಸ್ಥಿತರಿದ್ದರು.

ವಾರ್ಷಿಕ ಹಬ್ಬದ ಅಂಗವಾಗಿ
ಗಾನಸಿರಿ ಸುಳ್ಯ ಶಾಖೆಯ ವಿದ್ಯಾರ್ಥಿಗಳಿಗೆ ಟಿವಿ ರಿಯಾಲಿಟಿ ಶೋ ಮಾದರಿಯಲ್ಲಿ ಅದ್ದೂರಿ ಗಾಯನ ಸ್ಪರ್ಧೆ ನಡೆಯಿತು.
ಸುಳ್ಯ ಶಾಖೆಯ ವಿದ್ಯಾರ್ಥಿಗಳನ್ನು ಗಾನಯಾನ, ಶ್ರುತಿ ಲಯ, ಗೀತ ಲಹರಿ, ಸ್ವರ ಮಧುರ ಹೀಗೆ 4 ತಂಡಗಳಾಗಿ ವಿಭಾಗಿಸಿ ಪ್ರತಿ ತಂಡಕ್ಕೆ ತಲಾ 60 ನಿಮಿಷಗಳ ಸಮಯಾವಕಾಶ ನೀಡಲಾಗಿತ್ತು. ವಿವಿಧ ತಂಡಗಳ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವಿವಿಧ ಪ್ರಾಕಾರಗಳ ಗೀತ ವೈವಿಧ್ಯ ಮನ ಸೆಳೆಯಿತು. ನೆರೆದ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣ ಬಡಿಸಿತು.













