ಸುಳ್ಯ:ಗಾನಸಿರಿ ಕಲಾಕೇಂದ್ರ ಪುತ್ತೂರು ಇದರ ಸುಳ್ಯ ಶಾಖೆಯ ವಾರ್ಷಿಕ ಹಬ್ಬ ‘ನಾದ ನಿನಾದ-2024’ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಕಲಾ ವೇದಿಕೆಯಲ್ಲಿ ನಡೆಯಿತು. ವಾರ್ಷಿಕ ಹಬ್ಬದ ಅಂಗವಾಗಿ
ಗಾನಸಿರಿ ಸುಳ್ಯ ಶಾಖೆಯ ವಿದ್ಯಾರ್ಥಿಗಳಿಗೆ ಟಿವಿ ರಿಯಾಲಿಟಿ ಶೋ ಮಾದರಿಯಲ್ಲಿ ಗಾಯನ ಸ್ಪರ್ಧೆ ನಡೆಯಿತು. ಅಶ್ವಿಜ್ ಅತ್ರೇಯ ನೇತೃತ್ವದ ಶ್ರುತಿಲಯ ತಂಡ ಚಾಂಪಿಯನ್ ಆಯಿತು.ಶಾಮಿಲಿ ನೇತೃತ್ವದ ಸ್ವರ ಮಾಧುರ್ಯ ತಂಡ ರನ್ನರ್ ಅಫ್ ಪ್ರಶಸ್ತಿ ಪಡೆಯಿತು. ಅತ್ಯುತ್ತಮ ಹಾಡುಗಾರರಾಗಿ
ಅಶ್ವಿಜ್ ಅತ್ರೇಯ, ಅವನಿ, ಚಂದನ್, ಕಿರಣ್, ಕ್ಷಮಾ, ಯಶ್ವಿಕಾ ಆಯ್ಕೆಯಾದರು. ಲಿಟಲ್ ಕಿಡ್ ಸಿಂಗರ್ ಆಗಿ ದಿಶಾನ್ವಿ ಆಯ್ಕೆಯಾಗಿದ್ದಾರೆ.
ಖ್ಯಾತ ಗಾಯಕರು ಹಾಗೂ ಗಾನಸಿರಿ ಕಲಾ ಕೇಂದ್ರದ ಮುಖ್ಯಸ್ಥರೂ ಆದ ಡಾ.ಕಿರಣ್ ಕುಮಾರ್, ಗಾನಸಿರಿ ಸಹಶಿಕ್ಷಕಿ, ಶ್ರೀಲಕ್ಷ್ಮಿ, ಹಿಮ್ಮೇಳ ಕಲಾವಿದರಾದ ಡಾ . ದಿನೇಶ್ ರಾವ್, ಸುಹಾಸ್ ಹೆಬ್ಬಾರ್, ಸುದರ್ಶನ ಜ್ಯೋತಿಗುಡ್ಡೆಉಪಸ್ಥಿತರಿದ್ದರುಸಸಹಕರಿಸಿದರು.
ಸುಳ್ಯ ಶಾಖೆಯ ವಿದ್ಯಾರ್ಥಿಗಳನ್ನು ಗಾನಯಾನ, ಶ್ರುತಿ ಲಯ, ಗೀತ ಲಹರಿ, ಸ್ವರ ಮಧುರ ಹೀಗೆ 4 ತಂಡಗಳಾಗಿ ವಿಭಾಗಿಸಿ ಸ್ಪರ್ಧೆ ನಡೆಸಲಾಗಿತ್ತು. ಪ್ರತಿ ತಂಡಕ್ಕೆ ತಲಾ 60 ನಿಮಿಷಗಳ ಸಮಯಾವಕಾಶ ನೀಡಲಾಗಿತ್ತು.












