ಸುಳ್ಯ:ಕಳೆದ 23 ವರ್ಷಗಳಿಂದ ಸಂಗೀತ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗಾನಸಿರಿ ಕಲಾಕೇಂದ್ರ ಪುತ್ತೂರು ಇದರ ಸುಳ್ಯ ಶಾಖೆಯ ವಾರ್ಷಿಕ ಹಬ್ಬ ‘ನಾದ ನಿನಾದ-2024’ ಜ.21 ರಂದು ಸಂಜೆ 4ರಿಂದ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಕಲಾ ವೇದಿಕೆಯಲ್ಲಿ ನಡೆಯಲಿದೆ. ಖ್ಯಾತ ಗಾಯಕರು ಹಾಗೂ ಗಾನಸಿರಿ ಕಲಾ ಕೇಂದ್ರದ ಮುಖ್ಯಸ್ಥರೂ ಆದ ಡಾ.ಕಿರಣ್ ಕುಮಾರ್ ಗಾನಸಿರಿ ಅವರ
ಸಾರಥ್ಯದಲ್ಲಿ ಗಾನಸಿರಿ ಸುಳ್ಯ ಶಾಖೆಯ ವಿದ್ಯಾರ್ಥಿಗಳಿಗೆ ಟಿವಿ ರಿಯಾಲಿಟಿ ಶೋ ಮಾದರಿಯಲ್ಲಿ ಅದ್ದೂರಿ ಗಾಯನ ಸ್ಪರ್ಧೆ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು ಸಂಗೀತದ ರಸದೌತಣ ಸವಿಯಬಹುದು ಎಂದು ಡಾ.ಕಿರಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

32 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ:
ಆರ್ಯಭಟ ಪ್ರಶಸ್ತಿ ವಿಜೇತರಾದ ಖ್ಯಾತ ಗಾಯಕ, ಸಂಗೀತ ಗುರು ಡಾ. ಕಿರಣ್ ಕುಮಾರ್ ಗಾನಸಿರಿ ಅವರ ನೇತೃತ್ವದಲ್ಲಿ
ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಗಾನಸಿರಿ ಕಲಾ ಕೇಂದ್ರ 32 ಸಾವಿರಕ್ಕೂ ಅಧಿಕ ಮಂದಿಗೆ ಸಂಗೀತ ಶಿಕ್ಷಣ ಧಾರೆಯೆರೆದಿದೆ. ಇವರಲ್ಲಿ ಸಂಗೀತ ಶಿಕ್ಷಣ ಪಡೆದ ಹಲವು ಪ್ರತಿಭೆಗಳು ಕನ್ನಡದ ಖ್ಯಾತ ಟಿವಿ ರಿಯಾಲಿಟಿ ಶೋಗಳಲ್ಲಿ, ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಡಾ.ಕಿರಣ್ ಕುಮಾರ್ ಹಾಗೂ ಲಕ್ಷ್ಮೀ ಎಸ್.ಪುತ್ತೂರು ಇವರ ನೇತೃತ್ವದಲ್ಲಿ ತರಗತಿಗಳು ನಡೆಯುತ್ತಿದೆ.
ಸುಳ್ಯ ಶಾಖೆಯಲ್ಲಿ ಪ್ರತಿ ಗುರುವಾರ ತರಗತಿ:
ಗಾನಾಸಿರಿ ಕಲಾ ಕೇಂದ್ರದ ಸುಳ್ಯ ಶಾಖೆಯಲ್ಲಿ ಪ್ರತಿ ಗುರುವಾರ ಸಂಜೆ ಸುಗಮ ಸಂಗೀತ, ತಬಲಾ ಮತ್ತು ಚಿತ್ರಕಲಾ ತರಗತಿಗಳು ನಡೆಯಲಿದೆ. ದಾಖಲಾತಿಗಾಗಿ ಸಂಪರ್ಕಿಸಿ:
9901555893.










