ಸುಳ್ಯ:ಪುತ್ತೂರು ಆರ್ಲಪದವಿನ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ವತಿಯಿಂದ ಗಡಿ ಪ್ರದೇಶವಾದ ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಲವು ಸಾಧಕರಿಗೆ ಗಡಿನಾಡ ಧ್ವನಿ ಪ್ರಶಸ್ತಿ

ನೀಡಿ ಗೌರವಿಸಲಾಯಿತು.ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡ, ಸಂಘಟಕ ಕೆ.ಟಿ.ವಿಶ್ವನಾಥ, ಸಮಾಜ ಸೇವಕ ಶೈಲೇಶ್ ಅಂಬೆಕಲ್ಲು, ಸೌಮ್ಯ ಪೆರ್ನಾಜೆ, ಗಾಯಕಿ ಶುಭದಾ ಪ್ರಕಾಶ್ ಅವರಿಗೆ ಗಡಿನಾಡ ಧ್ವನಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡಾ.ಉಮ್ಮರ್ ಬೀಜದಕಟ್ಟೆ ಅವರಿಗೆ ಗಡಿನಾಡ ಧ್ವನಿ ಜ್ಞಾನ ಭೂಷಣ ಪ್ರಶಸ್ತಿ, ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರಿಗೆ ಗಡಿನಾಡ ಧ್ವನಿ ಕೃಷಿ ಭೂಷಣ ಪ್ರಶಸ್ತಿ, ಕೆ.ಟಿ.ವಿಶ್ವನಾಥ ಅವರಿಗೆ ಸಂಘಟನಾ ಚತುರ ಪ್ರಶಸ್ತಿ, ಶೈಲೇಶ್ ಅಂಬೆಕಲ್ಲು ಅವರಿಗೆ ಸಮಾಜಸೇವಾ ಭೂಷಣ ಪ್ರಶಸ್ತಿ, ಸೌಮ್ಯ ಪೆರ್ನಾಜೆ ಅವರಿಗೆ ಮಧುಭೂಷಣ, ಶುಭದಾ ಪ್ರಕಾಶ್ ಅವರಿಗೆ ಗಾನ ಭೂಷಣ ಪ್ರಶಸ್ತಿ

ಲಭಿಸಿದೆ. ಸಾದ್ವಿ ಮಾತಾನಂದಮಯಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಭಾರತಿ ಭಟ್ ಪಾಣಾಜೆ, ಕಾವು ಹೇಮನಾಥ ಶೆಟ್ಟಿ,ಮಿತ್ರಂಪಾಡಿ ಜಯರಾಮ್ ರೈ, ಮಲಾರ್ ಜಯರಾಮ್ ರೈ, ಗಡಿನಾಡ ದ್ವನಿ ಅಧ್ಯಕ್ಷರಾದ ಡಾ. ಹಾಜಿ.ಎಸ್ ಅಬೂಬಕರ್ ಅರ್ಲಪದವು, ಪ್ರ.ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ಕುಮಾರ್ ಪೆರ್ನಾಜೆ , ಪಿ.ಜಿ ಶಂಕರ್ ನಾರಾಯಣ ಭಟ್ ದೈತೋಟ ,ಮಹಾಬಲೇಶ್ವರ ಗಿಳಿಯಾಲು,ಮುಂತಾದವರು ಬಾಗವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.