The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಅಂಕಣ:ಗಡಿನಾಡ ದಡದಿಂದ.. ವಿಕಸಿತ ಸುಳ್ಯದ ನೆತ್ತಿಗೊಂದು ಸಿಂಧೂರಶೋಭೆ.. ಸರಕಾರಿ ದೇಣಿಗೆ ಇಲ್ಲ, ಜನತಾಬೆಂಬಲದಿಂದ ಅರಳುತ್ತಿದೆ ಒಂದು ಕೋಟಿಯ ಪತ್ರಿಕಾಭವನ..!

by ದಿ ಸುಳ್ಯ ಮಿರರ್ ಸುದ್ದಿಜಾಲ July 26, 2022
by ದಿ ಸುಳ್ಯ ಮಿರರ್ ಸುದ್ದಿಜಾಲ July 26, 2022
Share this article

*ಎಂ.ನಾ. ಚಂಬಲ್ತಿಮಾರ್.
ಸುಳ್ಯದ ಪತ್ರಕರ್ತರು ನಿಜಕ್ಕೂ ಕಾರ್ಯಮರೆತವರಲ್ಲ, ಅವರು ಸರಕಾರಿ ದೇಣಿಗೆಗೆ ಕೈಚಾಚದೇ ಪೇಟೆಯ ಹೃದಯಭಾಗದಲ್ಲೇ ನಿರ್ಮಿಸುತ್ತಿದ್ದಾರೆ ಒಂದು ಕೋಟಿ ರೂ. ವೆಚ್ಚದ ಪತ್ರಿಕಾ ಭವನ! ಮೊನ್ನೆ ಮೊನ್ನೆ ಸುಳ್ಯದ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಲೆಂದು ಹೋಗಿದ್ದೆ. ಮಧ್ಯಾಹ್ನ ಊಟ ಮುಗಿಸಿ ಪತ್ರಕರ್ತ ಗೆಳೆಯರನ್ನು ಬೀಳ್ಕೊಟ್ಟು ಹೋಟೆಲಿಂದ ಹೊರಗೆ ಕಾಲಿಡುವಷ್ಟರಲ್ಲೇ “ದಿ ಸುಳ್ಯ ಮಿರರ್” ಸಂಪಾದಕ, ಗೆಳೆಯ ಗಂಗಾಧರ ಕಲ್ಲಪ್ಪಳ್ಳಿ ಹೇಳಿದ “ಸರ್ ನೀವು ಮರಳುವ ಮುನ್ನ ಒಮ್ಮೆ ನಮ್ಮ ನಿರ್ಮಾಣ ಹಂತದಲ್ಲಿರುವ ಪತ್ರಿಕಾ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಭವನ ನೋಡಿ ಹೋಗಿ.., ಬನ್ನಿ..” ಎಂದು ನಾನೂ ಸಹಿತ ಪತ್ರಿಕಾದಿನಾಚರಣೆಯಲ್ಲಿ ಸನ್ಮಾನಿತಳಾದ ಹಿರಿಯ ಪತ್ರಕರ್ತೆ, ಅಂಕಣಗಾರ್ತಿ ಚಂದ್ರಾವತಿ ಬಡ್ಡಡ್ಕಳನ್ನು ಕರೆದೊಯ್ದರು.
ನೋಡುತ್ತೇನೆ ನನಗೇ ಅಚ್ಚರಿ..!
ಅದು ಸುಳ್ಯದ ಹೃದಯ ಭಾಗ. ತಾ.ಪಂ ಒದಗಿಸಿದ ಐದು ಸೆಂಟ್ಸ್ ಜಾಗದಲ್ಲಿ ಒಂದಿಂಚು ಸ್ಥಳವೂ ಉಪಯೋಗ ಶೂನ್ಯವಾಗದಂತೆ ಎರಡು ಮಹಡಿಯ ವ್ಯವಸ್ಥಿತ ಪತ್ರಿಕಾ ಭವನವೊಂದು ಅರಳುತ್ತಿದೆ. ಇದರ ವೈಶಿಷ್ಟ್ಯ ಏನಂದ್ರೆ ಈ ಕಟ್ಟಡಕ್ಕಾಗಿ ಪತ್ರಕರ್ತರು ಸರಕಾರದ ಅನುದಾನ ಪಡೆದಿಲ್ಲ. ಬದಲಿಗೆ ಸುಳ್ಯ ತಾಲೂಕಿನ ನಾಗರಿಕ ದಾನಿಗಳ ಆರ್ಥಿಕ ಸಹಾಯದಿಂದಲೇ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಅರ್ಧಾಂಶ ಕಾಮಗಾರಿ ನಡೆದಿದ್ದು, ಪತ್ರಕರ್ತರು ಸಾಂಘಿಕವಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದಿಂದ ಗಣ್ಯರ ಮನೆಬಾಗಿಲು ತಟ್ಟುತ್ತಿದ್ದಾರೆ. ಆದರೆ ಕೊರೋನೋತ್ತರದ ಸಂಕಟದ ಕಾಲವನ್ನು ದಾಟುತ್ತಿರುವ ವೇಳೆಯಲ್ಲೂ ಯಾರೊಬ್ಬರೂ ಸುಳ್ಯದ ಪತ್ರಕರ್ತರನ್ನು ನಿರಾಶೆಗೊಳಿಸಿದ್ದಿಲ್ಲ ಎನ್ನುವುದೇ ಗಮನೀಯ.
ಸುಳ್ಯದಲ್ಲಿ ಪತ್ರಕರ್ತರಿಗೆ ಎರಡು ಸಂಘಟನೆಗಳಿವೆ. ಆದರೆ ತಮಗೊಂದು ಪ್ರೆಸ್ ಕ್ಲಬ್ ಬೇಕೆನ್ನುವುದರಲ್ಲಿ ಅವರದ್ದು ಐಕ್ಯತೆಯ ನಿಲುವು, ಸಾಂಘಿಕ ಪ್ರಯತ್ನ. ಅದು ಬೇಗನೇ ಅಸ್ತಿತ್ವಕ್ಕೆ ಬರಬೇಕೆಂಬ ಕಾಳಜಿಯಿಂದ ಅವರು ನಿಷ್ಠೆಯ ಕಾರ್ಯನಿರತರು. ಸುಳ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದು 23 ವರ್ಷಗಳಾಯಿತು. ಇನ್ನೊಂದು ವರ್ಷ ದಾಟಿದರೆ ಸಂಘಕ್ಕೆ ರಜತ ಸಂಭ್ರಮ. ಆ ಹೊತ್ತಿಗಾಗಲೇ ನೂತನ ಪತ್ರಿಕಾ ಭವನ ತಲೆ ಎತ್ತಬೇಕು ಎನ್ನುವುದು ಪತ್ರಕರ್ತರ ಸದಾಶಯ. ಈ ನಿಟ್ಟಿನಲ್ಲವರು ಸೃಜನಶೀಲರು, ಚಲನಶೀಲರು.

ಮೊನ್ನೆ ಪತ್ರಿಕಾದಿನಾಚರಣೆಯಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರೀ ಧುರೀಣ, ಸಾಂಸ್ಕೃತಿಕ ಕಳಕಳಿಯುಳ್ಳ ಆತ್ಮೀಯರಾದ ಸವಣೂರು ಸೀತಾರಾಮ ರೈಗಳ ಬಳಿಯಲ್ಲೇ ನಾನೂ ವೇದಿಕೆ ಹಂಚಿಕೊಂಡಿದ್ದೆ. ವೇದಿಕೆಯಲ್ಲಿ ಕಲಾಪ ನಡೆಯುತ್ತಿದ್ದಂತೆಯೇ ನಾವು ಪರಸ್ಪರಮಾತಾಡಿಕೊಳ್ಳುತ್ತಿದ್ದೆವು. ಆಗವರಂದರು”ಸುಳ್ಯದ ಪತ್ರಕರ್ತರು ಜಗಳಗಂಟರಲ್ಲ, ಪೀಡಕರೂ ಅಲ್ಲ. ಅವರು ಸಮಾಜಮುಖಿ ಕಳಕಳಿಯವರು. ಪ್ರೆಸ್ ಕ್ಲಬ್ ನಿರ್ಮಾಣಕ್ಕಾಗಿ ಸಾಂಘಿಕ ಪ್ರಯತ್ನ ಮಾಡುತ್ತಿದ್ದಾರೆ. ಸಮಾಜದೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. ಅದನ್ನು ನೋಡುವಾಗ ಖುಷಿಯಾಗುತ್ತದೆ” ಎಂದರು. ನನಗೂ ಖುಷಿಯಾಯಿತು. ಪತ್ರಕರ್ತರು ಸಮಾಜದಿಂದ ಪ್ರೀತಿಸಲ್ಪಡಬೇಕು, ಧ್ವೇಷಿಸಲ್ಪಡಬಾರದು. ಈ ಪ್ರೀತಿಯ ಬಾಂಧವ್ಯ ಆರೋಗ್ಯಕರವಾಗಿದ್ದರೆ ಪತ್ರಕರ್ತರನ್ನು ಸಮಾಜ ಕೈ ಬಿಡದು. ಈ ಸಹೃದಯ ಸಂಬಂಧ ಚೆನ್ನಾಗಿರುವುದರಿಂದಲೇ ಸುಳ್ಯದ ಪತ್ರಕರ್ತರು ಬಾಗಿಲು ತಟ್ಟಿದ ಮನೆಗಳಿಂದ ಬರಿಗೈಯ್ಯಲ್ಲಿ ಬಂದಿಲ್ಲ.ಇಷ್ಟಕ್ಕೂ ಇವರು ಬಾಗಿಲು ತಟ್ಟುವುದು, ಗಣ್ಯ, ಧುರೀಣ, ಉದ್ಯಮಿಗಳಿಗೆ ಮನವಿ ನೀಡಿ ನಮಸ್ಕರಿಸುವುದು ತಮ್ಮ ವೈಯ್ಯಕ್ತಿಕ ವಿಷಯಕ್ಕಲ್ಲ. ಸುಳ್ಯ ಬೆಳೆಯುತ್ತಿರುವ ಪೇಟೆ. ಎಲ್ಲಾ ನಗರಗಳಲ್ಲಿರುವಂತೆ ಸುಳ್ಯಕ್ಕೂ ನಗರದ ಛಾಯೆ ಬಂದಿದೆ. ವರ್ತಮಾನದಲ್ಲಿ ಮಾಧ್ಯಮಗಳು ವಿಫುಲವಾಗಿ ಬೆಳೆಯುತ್ತಿರುವುದರಿಂದ ಅದನ್ನು ಪ್ರತಿನಿಧೀಕರಿಸುವವರಿಗೆ ಸುವ್ಯವಸ್ಥಿತ ಆಸ್ಥಾನ ಅಗತ್ಯ. ಜನತೆಗೆ ಮಾಧ್ಯಮದವರೆಲ್ಲರನ್ನು ಭೇಟಿಯಾಗಲು, ಸುದ್ದಿಗೋಷ್ಠಿ ನಡೆಸಲು, ಮಾಧ್ಯಮದವರೊಡನೆ ವಿಚಾರ ಹಂಚಲು ಸಮಾಜಕ್ಕೂ ಪತ್ರಿಕಾಭವನ ಅತ್ಯಗತ್ಯ. ವ್ಯವಸ್ಥಿತ ಪ್ರೆಸ್ ಕ್ಲಬ್ ಇಲ್ಲದಿರುವುದು ಪತ್ರಕರ್ತರ ಸಂಘದ ಕೊರತೆಯಷ್ಟೇ ಅಲ್ಲ, ಅದು ನಾಡಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಲಯದ ಕೊರತೆಯೂ ಹೌದು. ಏಕೆಂದರೆ ಮಾಧ್ಯಮಗಳಿರುವುದು ಜನತೆಗಾಗಿ. ಅದು ಜನರಿಂದಲೇ ಬೆಳೆದ, ಬೆಳೆಯಬೇಕಾದ ಸಂಸ್ಥೆ. ಜತೆಗೆ ಪತ್ರಿಕಾಭವನ ಎಂದರೆ ಅದು ಪತ್ರಕರ್ತರಿಗಷ್ಟೇ ಅಲ್ಲ, ಅದು ನಾಗರಿಕರ ಮಾಧ್ಯಮ ಸಂಪರ್ಕದ ತಾಣ. ಸಾಂಸ್ಕೃತಿಕ, ಸಾಹಿತ್ಯ, ಕಲಾವಲಯದ ಸೃಜನಶೀಲ ಚಟುವಟಿಕೆಗಳ ವೇದಿಕೆಯೂ ಹೌದು.

ಇಂಥದ್ದೊಂದು ತಾಣ ಬೆಳೆಯುವ ಸುಳ್ಯದ ಅಭಿವೃದ್ಧಿಯ ನೆತ್ತಿಯ ಸಿಂಧೂರದಂತೆ ಅರಳುತ್ತಿದೆ. ಕೊರೋನೋತ್ತರ ಕಾಲದಲ್ಲಿ ಇಂಥದ್ದೊಂದು ಸಾಹಸಕ್ಕಿಳಿದ ಪತ್ರಕರ್ತರದ್ದು ನಿಜಕ್ಕೂ ಸಾಧನೆ. ಈ ಸಾಧನೆಯ ಪಯಣಕ್ಕೆ ಅವರೊಳಗಿನ ಆತ್ಮವಿಶ್ವಾಸ ಏನೆಂದ್ರೆ ಸಾಮಾಜಿಕರೊಡನೆ ಇರುವ ಸಾಮರಸ್ಯದ ಸಂಬಂಧ. ಕಳೆದ ಅನೇಕ ವರ್ಷಗಳಿಂದ ಸುಳ್ಯದ ಪ್ರಗತಿಯಲ್ಲಿ, ಸೂರ್ಲಯದ ಸಾಮಾಜಿಕ ಸಾಂಸ್ಕೃತಿಕ ಬದುಕಿನ ಆಶೋತ್ತರಗಳಿಗೆ ಪತ್ರಿಕೆಗಳು, ಪತ್ರಕರ್ತರು ನೀಡಿದ ಕೊಡುಗೆ ಚಿಕ್ಕದೇನಲ್ಲ. ಒಂದು ನಾಡಿನ ಇತಿಹಾಸ ಅರಿಯಬೇಕಿದ್ದರೆ ಮಹದ್‌ಗ್ರಂಥ ಹುಡುಕಬೇಕಾದ ಅಗತ್ಯವೇನಿಲ್ಲ. ಆ ನಾಡಿನ ದಿನಪತ್ರಿಕೆಗಳ ಕಂತೆಯನ್ನು ಹುಡುಕಿದರೆ ಸಾಕು. ಅದರೊಳಗೆ ಅಕ್ಷರದಲ್ಲಿ ಮುದ್ರಿತವಾಗಿ ಜನರ ಇತಿಹಾಸ ಮಲಗಿದೆ. ಇಂಥ ಜನರ ಇತಿಹಾಸ ಬರೆದವರೇ ಪತ್ರಕರ್ತರು. ಅಂಥ ಪತ್ರಕರ್ತರಿಗೆ ಒಂದು ಭವನ ನಿರ್ಮಾಣವಾಗುವಾಗ ಜನರು ಕೈ ಬಿಡುವರೇ…?

ಚಂದ್ರಾವತಿ ಬಡ್ಡಡ್ಕ, ಗಿರೀಶ್ ಅಡ್ಪಂಗಾಯ, ಎಂ.ನಾ.ಚಂಬಲ್ತಿಮಾರ್ ಪತ್ರಿಕಾ ಭವನ ಕಟ್ಟಡದಲ್ಲಿ

(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು. ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಮಳೆ ನಿಂತ ಬಳಿಕ ಪಟ ಪಟನೆ ಉದುರುತಿದೆ ಕಾಯಿ ಅಡಿಕೆ: ವ್ಯಾಪಕವಾಗಿ ಕಂಡು ಬಂದಿದೆ ಅಡಿಕೆಗೆ ಕೊಳೆ ರೋಗ ಲಕ್ಷಣ..!
next post
ಬೆಳ್ಳಾರೆಯಲ್ಲಿ ದುಷ್ಕರ್ಮಿಗಳ ತಂಡದಿಂದ ಯುವಕನ ಮೇಲೆ ದಾಳಿ: ಗಂಭೀರ ಗಾಯಗೊಂಡ ಯುವಕ ಮೃತ್ಯು

You may also like

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಮಾರ್ಗಸೂಚಿ...

June 5, 2023

ಮುಂದಿನ 48 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ ಸಾಧ್ಯತೆ:...

June 5, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ
  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ