ಕಡಬ: ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಬಿರುಗಾಳಿಯಿಂದ ಭಾರೀ ಕೃಷಿ ನಾಶ ಸಂಭವಿಸಿದೆ. ಭಾರೀ ಹಾನಿ ಉಂಟಾಗಿರುವ ಕಡಬ ತಾಲೂಕಿನ ಗ್ರಾಮೀಣ ಭಾಗಗಳಿಗೆ ಕಾಂಗ್ರೆಸ್ ಸುಳ್ಯ ವಿಧಾನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಕೆಪಿಸಿಸಿ ಮುಖಂಡ ಜಿ.ಕೃಷ್ಣಪ್ಪ ಭೇಟಿ ನೀಡಿದರು. ದೋಳ್ಪಾಡಿ ಸೇರಿ ವಿವಿಧ

ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಕೃಷಿಕರಿಗೆ ಉಂಟಾಗಿರುವ ನಷ್ಟದ ಕುರಿತು ಸರಕಾರಕ್ಕೆ ತಿಳಿಸಿ ಸೂಕ್ತ ಪರಿಹಾರ ದೊರಕಿಸುವ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.ಕಡಬ ತಾಲೂಕಿನ ಸವಣೂರು, ದೋಳ್ಪಾಡಿ, ಬೆಳಂದೂರು, ಎಡಮಂಗಲ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಳವಾರ ಮುಂಜಾನೆ ಬೀಸಿದ ಬಿರುಗಾಳಿಗೆ ಭಾರೀ ಹಾನಿ ಸಂಭವಿಸಿತ್ತು.





