ಸುಳ್ಯ: ಕೆಪಿಸಿಸಿ ಸಂಯೋಜಕ ಹಾಗು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾದ ಉದ್ಯಮಿ ಜಿ. ಕೃಷ್ಣಪ್ಪ ಅವರು ಸುಳ್ಯದ ಅಂಬೆಟಡ್ಕದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪ್ರೆಸ್ ಕ್ಲಬ್ ಕಟ್ಟಡಕ್ಕೆ ಲಕ್ಷದ 1 ಸಾವಿರ ದೇಣಿಗೆ ನೀಡಿದ್ದಾರೆ.ಅ.12 ರಂದು ಪ್ರೆಸ್ ಕ್ಲಬ್ ಕಟ್ಟಡಕ್ಕೆ ಆಗಮಿಸಿ ಕಟ್ಟಡ
ಕಾಮಗಾರಿ ವೀಕ್ಷಿಸಿದ ಅವರು ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರಿಗೆ ಚೆಕ್ ಅನ್ನು ಕೃಷ್ಣಪ್ಪರು ಹಸ್ತಾಂತರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರ್, ಟಿ.ಎಂ.ಶಾಹೀದ್ ತೆಕ್ಕಿಲ್,ಸದಾನಂದ ಮಾವಜಿ, ಸುರೇಶ್ ಎಂ.ಎಚ್, ರಹೀಂ ಬೀಜದಕಟ್ಟೆ, ಪಿ.ಕೆ.ಅಬೂಸಾಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಖಜಾಂಜಿ ಯಶ್ವಿತ್ ಕಾಳಮ್ಮನೆ, ಪ್ರೆಸ್ ಕ್ಲಬ್ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.