ಸುಳ್ಯ: ದೀಪಾವಳಿ ಪ್ರಯುಕ್ತ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಸುಳ್ಯದ ಮತ್ಸ್ಯ ಪ್ರಿಯರಿಗೆ ಸಿಹಿ ಸುದ್ದಿ. ಅ.25 ರಂದು ಸುಳ್ಯ ಗಾಂಧಿನಗರದ ನಿಗಮದ ಮೀನು ಮಾರಾಟ ಕೇಂದ್ರದಲ್ಲಿ ರಿಯಾಯಿತಿ ದರದ ಮಾರಾಟ ನಡೆಯುತಿದೆ. ಗುಣ ಮಟ್ಟದ ತಾಜಾ

ಮೀನುಗಳನ್ನು ಸುಳ್ಯದ ಗ್ರಾಹಕರಿಗಾಗಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತಿದೆ. ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಅವರು ಮೀನು ನೀಡುವ ಮೂಲಕ ರಿಯಾಯಿತಿ ದರದ ಮಾರಾಟಕ್ಕೆ ಚಾಲನೆ ನೀಡಿದರು. ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸುಳ್ಯದ ಗ್ರಾಹಕರಿಗೆ ನಿಗಮದ ವತಿಯಿಂದ ಒಂದು ಕೊಡುಗೆ ಇದು ಎಂದು ಅವರು ಹೇಳಿದರು.
ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಬಿಜೆಪಿ ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಪ್ರಬೋದ್ ಶೆಟ್ಟಿ ಮೇನಾಲ, ಕೆಎಫ್ಡಿಸಿ ಗಾಂಧಿನಗರ ಔಟ್ಲೆಟ್ನ ಹಮೀದ್, ನಿಗಮದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
