ಸುಳ್ಯ: ಜೋರ್ಡಾನ್. ಪ್ಯಾಲೇಸ್ತೇನ್, ಇಸ್ರೇಲ್ ಈಜಿಪ್ಟ್ ವಿದೇಶ ಯಾತ್ರೆ ಕೈಗೊಳ್ಳುವಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ, ಹಮೀದ್ ಕುತ್ತಾಮೊಟ್ಟೆ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಅಂತಾರಾಷ್ಟ್ರೀಯ
ಖ್ಯಾತಿಯ ಪ್ರಭಾಷಣಕಾರರಾದ ಸಿರಾಜುದ್ದೀನ್ ಖಾಸಿಮಿ ನಿಯೋಗದ ನೇತೃತ್ವ ವಹಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಯಾರ್ತಾರ್ಥಿ ಗಳನ್ನು ಬೀಳ್ಕೊಟ್ಟು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಅನ್ಸಾರಿಯಾ ಸೆಂಟರ್ ಅಧ್ಯಕ್ಷ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ನಗರ ಪಂಚಾಯತ್ ಸದಸ್ಯಕೆ. ಎಸ್. ಉಮ್ಮರ್, ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಖಾದರ್ ಪಟೇಲ್ ಆರಂತೋಡು, ಮೊದಲಾದವರು ಉಪಸ್ಥಿತರಿದ್ದರು