ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಸಂಘ ಪರಿವಾರದ ಸಹಕಾರದಿಂದ ಆರ್ಥಿಕ ಸಹಕಾರ ನೀಡಲು ತೀರ್ಮಾನಿಸಿದ್ದೇವೆ ಎಂದು
ಸಚಿವ ಎಸ್.ಅಂಗಾರ ಹಾಗು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವೀಣ್ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದು, ಇವರ ಕುಟುಂಬ ಸಂಕಷ್ಟಕ್ಕೀಡಾಗಿರುವುದು ನಮ್ಮೆಲ್ಲರ ನೋವಿನ ಸಂಗತಿ. ನಾವೆಲ್ಲರೂ ಅವರ ಕುಟುಂಬದ ಸದಸ್ಯರು ಆಗಿದ್ದು, ಅವರ ಕುಟುಂಬದ ನಿರ್ವಹಣೆಗೆ ಆರ್ಥಿಕ ಶಕ್ತಿಗೋಸ್ಕರ ಭಾರತೀಯ ಜನತಾ ಪಾರ್ಟಿ ಮತ್ತು ಎಲ್ಲಾ ಸಂಘ ಪರಿವಾರದ ಸಂಘಟನೆಗಳ ಸಹಕಾರದೊಂದಿಗೆ ರೂಪಾಯಿ 50 ಲಕ್ಷಕ್ಕೆ ಕಡಿಮೆಯಾಗದಂತೆ ಆರ್ಥಿಕ ಸಹಕಾರ ನೀಡುವುದೆಂದು ನಿರ್ಧರಿಸಿರುತ್ತೇವೆ. ಇದಕ್ಕೆ ಹಿಂದೂ ಸಮಾಜ ಸಹಕಾರ ನೀಡುವ ವಿಶ್ವಾಸ ಇದೆ ಎಂದು ಬಿಜೆಪಿ ಮಂಡಲ ಸಮಿತಿ ಪ್ರಕಟಣೆ ತಿಳಿಸಿದೆ.