ಸುಳ್ಯ:ಲೋಕಸಭಾ ಚುನಾವಣೆಯಲ್ಲಿ ದ.ಕ.ಲೊಕಸಭಾ ಕ್ಷೇತ್ರದಲ್ಲಿ ಶೇ.77.56 ಮತದಾನವಾಗಿದೆ. 18,17,603 ಮತದಾರರಲ್ಲಿ 14,09,653 ಮತದಾರರು ಮತ ಚಲಾಯಿಸಿದ್ದಾರೆ.
ಸುಳ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ. 83.01 ಮತದಾನ ಆಗಿದೆ.
2,08,853 ಮತದಾರರಲ್ಲಿ 1,73,374 ಮತದಾರರು
ಮತ ಚಲಾಯಿಸಿದ್ದಾರೆ.
ಬೆಳ್ತಂಗಡಿ ಶೇ 81.30 ಮತದಾನ ಆಗಿದೆ. 2,32,817 ಮತದಾರರಲ್ಲಿ 1,89,289 ಮತದಾರರು ಮತ ಚಲಾಯಿಸಿದ್ದಾರೆ.
ಮೂಡಬಿದ್ರೆ ಶೇ. 76.51 ಮತದಾನ ಆಗಿದೆ. 2,10,125 ಮತದಾರರ ಪೈಕಿ 1,60,767 ಮತದಾರರು ಮತ ಚಲಾಯಿಸಿದರು.
ಮಂಗಳೂರು ಉತ್ತರ ಶೇ.73.78. 2,55,946 ಮತದಾರರಲ್ಲಿ 1,88,825 ಮಂದಿ ಮತ ಚಲಾಯಿಸಿದರು.
ಮಂಗಳೂರು ದಕ್ಷಿಣ ಶೇ.67.17. 252,583 ಮತದಾರರ ಪೈಕಿ 1,69,669 ಮಂದಿ ಮತ ಚಲಾಯಿಸಿದರು.
ಮಂಗಳೂರು ಶೇ.78.36. 2,10,093 ಮತದಾರರಲ್ಲಿ, 1,64,637 ಮತದಾರರು ಮತ ಚಲಾಯಿಸಿದರು.
ಬಂಟ್ವಾಳ ಶೆ.81.28, 2,30,511 ಮತದಾರರಲ್ಲಿ 1,87,361 ಮತದಾರರು ಮತ ಚಲಾಯಿಸಿದರು.
ಪುತ್ತೂರು ಶೇ.81.10 ಮತದಾನ ಆಗಿದೆ.2,16,675 ಮತದಾರರಲ್ಲಿ 1,75,731ಮಂದಿ ಮತ ಚಲಾಯಿಸಿದರು.