ಸುಳ್ಯ: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಫಾತಿಮಾತ್ ಶಹ್ಲಾ ರಾಜ್ಯಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ. 600ರಲ್ಲಿ 595 ಅಂಕ ಪಡೆದ ಫಾತಿಮಾತ್ ಶಹ್ಲಾ ಎರಡನೇ ರ್ಯಾಂಕ್ ಪಡೆದಿದ್ದಾರೆ. ಫಾತಿಮಾತ್ ಶಹ್ಲಾ ಸುಳ್ಯ ಶಾಂತಿನಗರದ
ಕೆ.ಎಂ.ಆಬಿದ್ ಮತ್ತು ಶಾದಿರಾ ದಂಪತಿಗಳ ಪುತ್ರಿ.
ದ್ವಿತೀಯ ಪಿಯುಸಿಯಲ್ಲಿ ಶಾರದಾ ಪದವಿ ಪೂರ್ವ ಕಾಲೇಜಿಗೆ ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 100 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 99 ಫಲಿತಾಂಶ ದಾಖಲಾಗಿದೆ.ಕಲಾವಿಭಾಗದಲ್ಲಿ 16 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. 5 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ವಾಣೀಜ್ಯ ವಿಭಾಗದಲ್ಲಿ 29 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ.
6 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಪ್ರತೀಕ್ಷಾ 583 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 36 ಮಂದಿ ಪರೀಕ್ಷೆಗೆ ಹಾಜರಾಗಿದ್ದು 35 ಮಂದಿ ಉತ್ತೀರ್ಣರಾಗಿದ್ದಾರೆ. 13 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ತನುಜ್ಞ 575 ಅಂಕ ಪಡೆದಿದ್ದಾರೆ.











