ಸುಳ್ಯ:ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾದ ಸಿಬಿಸಿಟಿ ಎಕ್ಸ್ ರೇ ಘಟಕ, ಸಂಶೋಧನಾ ಕೇಂದ್ರ, ಔಷಧಾಲಯ ಮತ್ತು ಅಟೋಮೇಷನ್ ಸಾಪ್ಟ್‌ವೇರ್ ಸಿಸ್ಟಂ ಲೋಕಾರ್ಪಣೆ ಮಾಡಲಾಯಿತು. ಅ.31ರಂದು
ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿವಿಧ ಘಟಕಗಳಿಗೆ ಚಾಲನೆ ನೀಡಿ ಬಳಿಕ ಅಮರಶ್ರೀ ಭಾಗ್‌ನ ಕೆವಿಜಿ ಸಮುದಾಯಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ‘ಕಲಿಕೆಗೆ ಪೂರಕವಾಗಿ ಕಾಲೇಜಿನಲ್ಲಿ ಎಲ್ಲಾ

ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.ವಿವಿಧ ವಿಭಾಗಗಳನ್ನು ಮೆಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದರು. ಸುಳ್ಯದಲ್ಲಿ ಎಲ್ಲಾ ವೃತ್ತಿಪರ ಶಿಕ್ಷಣವನ್ನು ಅತ್ಯಂತ ಉತ್ತಮ ವಾತಾವರಣದಲ್ಲಿ ಸೌಹಾರ್ಧತೆಯಿಂದ ಕಲಿಯುವ ವ್ಯವಸ್ಥೆ ಇದೆ. ದೇಶ ವಿದೇಶಗಳಿಂದಲೂ ವಿದ್ಯಾರ್ಥಿಗಳು ಬಂದು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಎಲ್ಲಾ ಆಧುನಿಕ ವ್ಯವಸ್ಥೆಗಳನ್ನೂ ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ನವ ದೆಹಲಿಯ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಹಾಗು ಗೋವಾದ ಸರಕಾರಿ ದಂತ ಮಹಾವಿದ್ಯಾಲಯದ ಡೀನ್ ಡಾ. ಐಡಾ ಡಿ ನೊರ‍್ಹೋನ್ನಾ ಡಿ ಎಟೈಡೆ ಮಾತನಾಡಿ ‘ಉತ್ತಮ ಶಿಕ್ಷಣದಿಂದ ಈ ಜಗತ್ತನ್ನು ಗೆಲ್ಲಬಹುದು ಮತ್ತು ಜಗತ್ತನ್ನೇ ಬದಲಿಸಬಹುದು ಎಂದು ಹೇಳಿದರು. ಆಧುನಿಕ ವ್ಯವಸ್ಥೆಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣವನ್ನು ಪಡೆಯಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಮಿತ್ರ ಹೆಗ್ಡೆ ಮಾತನಾಡಿ ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಕಲಿಕೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲ ಆಲೋಚನೆ ಮತ್ತು ಸಂಶೋಧನಾ ಪ್ರವೃತ್ತಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸಲು ಸಹಾಯಕ ಎಂದು ಅವರು ಹೇಳಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ನಿರ್ದೇಶಕಿ ಡಾ.ಜ್ಯೋತಿ ಆರ್ ಪ್ರಸಾದ್, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಕೆವಿಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಎನ್.ಎ. ರಾಮಚಂದ್ರ, ಜಾಕೆ ಮಾಧವ ಗೌಡ, ಕಾಲೇಜಿನ ವಿಭಾಗ ಮುಖ್ಯಸ್ಥರಾದ ಡಾ.ಶರತ್ ಕುಮಾರ್ ಶೆಟ್ಟಿ,ಡಾ.ಸವಿತಾ ಸತ್ಯಪ್ರಸಾದ್, ಡಾ.ದಯಾಕರ ಎಂ.ಎಂ.,ಡಾ.ಕೃಷ್ಣಪ್ರಸಾದ್ ಎಲ್, ಡಾ. ನುಸ್ರತ್ ಫರೀದ್, ಡಾ.ಜಯಪ್ರಸಾದ್ ಆನೆಕಾರ್, ಡಾ.ಸುಹಾಸ್ ರಾವ್.ಕೆ, ಡಾ.ಪ್ರಸನ್ನಕುಮಾರ್.ಡಿ, ಡಾ.ಶೈಲಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ನಿರ್ದೇಶಕಿ ಡಾ.ಜ್ಯೋತಿ ಆರ್ ಪ್ರಸಾದ್, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಸ್ವಾಗತಿಸಿದರು.ಕೆವಿಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಜಯಪ್ರಸಾದ್ ಆನೆಕಾರ್ ವಂದಿಸಿದರು. ಡಾ.ಪಲ್ಲವಿ ಮತ್ತು ಡಾ.ಆಕಾಶ್ ವಂದಿಸಿದರು.

ಸನ್ಮಾನ,ಗೌರವಾರ್ಪಣೆ:
ಡಾ. ಐಡಾ ಡಿ ನೊರ‍್ಹೋನ್ನಾ ಡಿ ಎಟೈಡೆ, ಡಾ. ಮಿತ್ರ ಹೆಗ್ಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ಸವಿತಾ ಸತ್ಯಪ್ರಸಾದ್, ಡಾ.ನುಸ್ರುತ್ ಫರೀದ್, ಡಾ.ಕೃಷ್ಣಪ್ರಸಾದ್, ಡಾ.ಮನೋಜ್ ಅಡ್ಡಂತ್ತಡ್ಕ, ಡಾ.ರೇವಂತ್ ಸೂಂತೋಡು ಅವರನ್ನು ಸನ್ಮಾನಿಸಲಾಯಿತು. ಡಾ.ರೇಣುಕಾಪ್ರಸಾದ್ ಕೆ.ವಿ. ಹಾಗು ಡಾ.ಜ್ಯೋತಿ ಆರ್.ಪ್ರಸಾದ್ ಸನ್ಮಾನ ನೆರವೇರಿಸಿದರು.

ಕೆವಿಜಿ ದಂತ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಾಧವ.ಬಿ.ಟಿ, ಭವಾನಿಶಂಕರ ಅಡ್ತಲೆ, ಪ್ರಮುಖರಾದ ಹರೀಶ್ ಕಂಜಿಪಿಲಿ, ಜಯಪ್ರಕಾಶ್ ಕುಂಚಡ್ಕ, ಡಾ.ಯಶೋಧಾ ರಾಮಚಂದ್ರ, ದಿನೇಶ್ ಮಡ್ತಿಲ, ಜಯಪ್ರಕಾಶ್ ಕಲ್ಲುಗದ್ದೆ, ಸಂತೋಷ್ ಕುತ್ತಮೊಟ್ಟೆ, ಸುನಿಲ್ ಕೇರ್ಪಳ, ಗಿರೀಶ್ ಕಲ್ಲುಗದ್ದೆ, ಸಂತೋಷ್ ಜಾಕೆ, ದೊಡ್ಡಣ್ಣ ಬರೆಮೇಲು, ಚಂದ್ರ ಕೋಲ್ಚಾರ್, ಬಾಲಗೋಪಾಲ ಸೇರ್ಕಜೆ, ಸೂರಯ್ಯ ಸೂಂತೋಡು, ಪಿ.ಎ.ಮಹಮ್ಮದ್, ದೀಪಕ್ ಕುತ್ತಮೊಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಅತ್ಯಾಧುನಿಕ ಎಕ್ಸ್‌ರೇ ವಿಭಾಗ: 1991ರಲ್ಲಿ ಸ್ಥಾಪನೆಗೊಂಡ ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ
ಇದೀಗ ಹೊಸ ಈ ಎಕ್ಸರೇ ಘಟಕವು ದಂತ ಮಹಾವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಆಧುನಿಕ ಸೇವೆಯನ್ನು ಒದಗಿಸಲು ಅನುಕೂಲಕರವಾಗಿದೆ. ಸುಳ್ಯ, ಪುತ್ತೂರು, ಮಡಿಕೇರಿ, ಕಾಸರಗೋಡು ಮುಂತಾದ ಪಟ್ಟಣಗಳಲ್ಲಿ ಇರುವ ದಂತವೈದ್ಯರಿಗೂ ಈ ಯಂತ್ರ ಪ್ರಯೋಜನಕಾರಿಯಾಗಲಿದೆ. ಇದರ ಉಪಯೋಗ ಇಂಪ್ಲಾಂಟೋಲಜಿ, ಬಾಯಿಯ ವಿವಿಧ ಶಸ್ತ್ರಚಿಕಿತ್ಸೆ, ಬೇರುನಾಳ ಚಿಕಿತ್ಸೆ ಮೊದಲಾದ ವಿಶೇಷ ಚಿಕಿತ್ಸಾ ವಿಧಾನಗಳಲ್ಲಿ ಇದರ ಅವಶ್ಯಕತೆಯಿರುತ್ತದೆ. ಸಂಶೋಧನಾ ಕೇಂದ್ರವು ಸಂಶೋಧನಾ ಕ್ಷೇತ್ರದಲ್ಲಿ ಸಹಾಯಕವಾಗಲಿದೆ ಎಂದು ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಉಜ್ವಲ್ ಯು.ಜೆ. ತಿಳಿಸಿದ್ದಾರೆ.
