ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ
ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದರು. ತಾಲ್ಲೂಕಿನ ಹನಕೆರೆ ಬಳಿ ಹೆದ್ದಾರಿಯಲ್ಲಿ ಹಾಕಲಾಗಿದ್ದ ಕೆಂಪು ಹಾಸಿನ ಮೇಲೆ 50 ಮೀಟರ್ಗಳವರೆಗೆ ಸಂಚಾರ ಮಾಡಿದ ಪ್ರಧಾನಿ ದಶಪಥ ಕಾಮಗಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ರಸ್ತೆಯ ಒಂದು
ಬದಿಯಲ್ಲಿ ಪ್ರಧಾನಿ ಹೆಜ್ಜೆ ಹಾಕಿದರೆ ಇನ್ನೊಂದು ಬದಿಯಲ್ಲಿ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿದವು.ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಜಾನಪದ ಕಲಾ ಪ್ರದರ್ಶನ ವೀಕ್ಷಿಸುತ್ತಾ ಪ್ರಧಾನಿ ಹೆದ್ದಾರಿಯಲ್ಲಿ ಸಂಚರಿಸಿದರು. ಕಲಾವಿದರಿಗೆ, ಸಾರ್ವಜನಿಕರಿಗೆ ಕೈಬೀಸಿ ಶುಭಾಶಯ ತಿಳಿಸಿದರು. ನಂತರ ಮಧ್ಯಾಹ್ನ 12.15ಕ್ಕೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿ ಬಳಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ನಂದ ಟಾಕೀಸ್ವರೆಗೆ 1.8 ಕಿ.ಮೀ ರೋಡ್ ಶೋ ನಡೆಸಿದರು.ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನರು ಸಾಲುಗಟ್ಟಿ ನಿಂತಿದ್ದರು. ‘ಮೋದಿ ಮೋದಿ’ ಜಯಘೋಷ ಮೊಳಗಿಸಿದ ಜನ ಪ್ರಧಾನಿ ಮೇಲೆ ಹೂವಿನ ಮಳೆಗರೆದರು. ಮೋದಿ ಅವರು ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು. 20 ನಮಿಷಗಳ ಕಾಲ1.8 ಕಿ.ಮೀ ರೋಡ್ ಶೋ ನಡೆಸಿದರು.