ಶ್ರೀಹರಿಕೋಟಾ: ಎಕ್ಸ್–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹವನ್ನು (ಎಕ್ಸ್ಪೊಸ್ಯಾಟ್) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಿದೆ.PSLV-C58 ರಾಕೆಟ್ ಹೊತ್ತೊಯ್ದ ಎಕ್ಸ್ಪೊಸ್ಯಾಟ್ ಉಪಗ್ರಹ
ಕಕ್ಷೆಗೆ ಸೇರಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್ಅಪ್ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ ವಾಹಕವು ಗಗನಕ್ಕೆ ಚಿಮ್ಮಿದೆ.
ಪಿಎಸ್ಎಲ್ವಿ-ಸಿ58 ಉಡಾವಣಾ ವಾಹನದಲ್ಲಿದ್ದ ಕ್ಯಾಮೆರಾಗಳು ಎಕ್ಸಪೋಸ್ಯಾಟ್ ಉಪಗ್ರಹ ಬಾಹ್ಯಾಕಾಶದಲ್ಲಿ ಬೇರ್ಪಡುವ ವಿಡಿಯೋವನ್ನು ಸೆರೆಹಿಡಿದ್ದು, ಇಸ್ರೋ ಇದನ್ನು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಕಟಿಸುವ ಮೂಲಕ ಸ್ಯಾಟಲೈಟ್ ಈಗ ನಿಗದಿತ ಗುರಿ ಮುಟ್ಟಿದೆ ಎಂದು ಹೇಳಿದೆ.ಇಸ್ರೋ ವಿಶ್ವದ ಎರಡನೇ ಮತ್ತು ದೇಶದ ಮೊದಲ ಇಂಥ ಉಪಗ್ರಹವನ್ನು ಉಡಾವಣೆ ಮಾಡಿದೆ, ಇದು ಪಲ್ಸರ್ಗಳು, ಕಪ್ಪು ಕುಳಿಗಳು, ಗೆಲಾಕ್ಸಿಗಳು ಮತ್ತು ವಿಕಿರಣ ಇತ್ಯಾದಿಗಳನ್ನು ಅಧ್ಯಯನ ಮಾಡುತ್ತದೆ.