ಸುಳ್ಯ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಸುಳ್ಯ ಇದರ ವತಿಯಿಂದ ಇವಿಎಂ ಮತ್ತು ವಿವಿಪ್ಯಾಟ್ ಗಳ ಭೌತಿಕ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ

ಕಾರ್ಯಕ್ರಮ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಗೊಂಡಿದೆ. ಸುಳ್ಯ ನಗರ ಪಂಚಾಯತ್ನಲ್ಲಿ ನಡೆದ ಕಾರ್ಯಕ್ರಮವನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉದ್ಘಾಟಿಸಿದರು.
ತಾಲೂಕು ಮಾಸ್ಟರ್ ತರಬೇತುದಾರರಾದ
ಪೃಥ್ವಿಕುಮಾರ್ ಟಿ ,ಸಹಾಯಕರಾದ ಲೋಕೇಶ್ ಉಪಸ್ಥಿತರಿದ್ದರು, ನಗರ ಪಂಚಾಯತ್ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.