ಸುಳ್ಯ:ಇಂದಿನ ಕಾಲದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವವಿದೆ. ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ಮೌಲ್ಯಯುತ ಜೀವನ ನಡೆಸಬೇಕು ಎಂದು
ಖ್ಯಾತ ವಾಗ್ಮಿ ಮುಹಮ್ಮದಲಿ ಸಖಾಫಿ ಮುಳ್ಳೂರುಕರ ಹೇಳಿದರು.ಎಣ್ಮೂರು- ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ದರ್ಗಾ ಶರೀಫ್ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ವಲಿಯುತ್ತಾಲ್ಲಾಹಿ ಮಶ್ಹೂರತ್ ಬೀಬಿ ಅವರ ಹೆಸರಿನಲ್ಲಿ ನಡೆದ ಇತಿಹಾಸ ಪ್ರಸಿದ್ಧ
ಎಣ್ಮೂರು ಮಖಾಂ ಉರೂಸ್ನ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಮಗ್ರಿಬ್ ನಮಾಝಿನ ನಂತರ ನಡೆದ ಸಮಾರಂಭದಲ್ಲಿ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು-ಮುಚ್ಚಿಲ ಇವರು ದುವಾಶೀರ್ವಚನ ನೀಡಿದರು.ಜಾವಗಲ್ ದರ್ಗಾ ಶರೀಫ್ ಅಧ್ಯಕ್ಷ ಶರೀಫ್ ಪಿ.ಇಸಾಕ್ ಸಾಹೇಬ್ ಪಾಜಪಳ್ಳ,ನಿಂತಿಕಲ್ಲು ಜುಮಾಮಸ್ಜಿದ್ ಖತೀಬರಾದ ಜಾಫರ್ ಸಅದಿ ಪಳ್ಳತ್ತೂರು, ಕೆ.ಎಂ.ಎಸ್.ಮುಹಮ್ಮದ್, ಅಬ್ದುಲ್ ಖಾದರ್ ಬಾಯಂಬಾಡಿ ಮತ್ತಿತರರು ಉಪಸ್ಥಿತರಿದ್ದರು.ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಉಮರಾ ಸಮಾವೇಶ ನಡೆಯಿತು. ಕರ್ನಾಟಕ ರಾಜ್ಯ ಹಜ್ ಸಮಿತಿ ಮಾಜಿ ಸದಸ್ಯ ಅಬೂಬಕ್ಕರ್ ಸಿದ್ದಿಕ್ ಮೋಂಟುಗುಳಿ ದಿಕ್ಸೂಚಿ ಭಾಷಣ ಮಾಡಿದರು.

ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ,ಮುಖಂಡರಾದ ಇನಾಯತ್ ಆಲಿ, ಎಂ.ಎಸ್.ಮಹಮ್ಮದ್, ಮೀರಾನ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
ಜ.15ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಉರೂಸ್ ಆರಂಭಗೊಂಡಿತು. ಧ್ವಜಾರೋಹಣವನ್ನು ಮಹಮ್ಮದ್ ಹನೀಫ್ ಐವತ್ತೊಕ್ಲು ನೆರವೇರಿಸಿದರು. ಅಸ್ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ದುಗಲಡ್ಕ ಅವರು ದುವಾಶೀರ್ವಚನ ನೀಡಿದರು. ಎಣ್ಮೂರು ಖತೀಬರಾದ ಅಲ್ ಹಾಜ್ ಅಬ್ದುಲ್ಲಾ ಮದನಿಯವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.ಪ್ರಖ್ಯಾತ ವಾಗ್ಮಿ ಮುಹಮ್ಮದ್ ಇರ್ಷಾದ್ ಅಝ್ಹರಿ ಮಲಪ್ಪುರಂ ಧಾರ್ಮಿಕ ಉಪನ್ಯಾಸ ನೀಡಿದರು.
ಜ.16ರಂದು ಜುಮಾ ನಮಾಝಿನ ಬಳಿಕ ಪಳ್ಳಿ ನೇರ್ಚೆ ನಡೆಯಿತು.
ರಾತ್ರಿ ನಡೆದ ಸಮಾರಂಭದಲ್ಲಿ ಅನ್ವರ್ ಅಲಿ ಹುದವಿ ಪುಲಿಯಕ್ಕೋಡು ಧಾರ್ಮಿಕ ಉಪನ್ಯಾಸ ನೀಡಿದರು. ಉರೂಸ್ ಸಮಿತಿ ಅಧ್ಯಕ್ಷ
ಅಬ್ದುಲ್ ಗಫೂರ್ ಕಲ್ಮಡ್ಕ.ಎಣ್ಮೂರು-ಐವತ್ತೊಕ್ಕು
ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್ನ ಅಧ್ಯಕ್ಷ
ಕೆ.ಎಂ. ಇಸ್ಮಾಯಿಲ್ ಪಡ್ಪಿನಂಗಡಿ,ಉರೂಸ್ ಸಮಿತಿ ಉಪಾಧ್ಯಕ್ಷ ಟಿ.ಎಸ್.ಅಬ್ದುಲ್ ಖಾದರ್, ಪ್ರಚಾರ ಸಮಿತಿ ಸಂಚಾಲಕ ಟಿ.ಎಸ್. ರಫೀಕ್, ಉರೂಸ್ ಸಮಿತಿ ಸದಸ್ಯ ರಫೀಕ್ ಐವತ್ತೊಕ್ಲು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉರೂಸ್ ಕಾರ್ಯಕ್ರಮಗಳಲ್ಲಿ ಜಾತಿಧರ್ಮಬೇಧವಿಲ್ಲದೆ ಸಾವಿರಾರು ಮಂದಿ ಭಾಗವಹಿಸಿದ್ದರು.












