ಸುಳ್ಯ: ಎನ್-ಲೈಟ್ ಅಕಾಡೆಮಿ ಸುಳ್ಯ ಇದರ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಸುಳ್ಯ ಗಾಂಧಿನಗರ ಅನ್ಸಾರ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ ವಹಿಸಿದರು. ಜಮಾತ್ ಕಮಿಟಿ ಸದಸ್ಯ ಹಾಜಿ ಎಸ್.ಎ ಹಮೀದ್ ದುವಾ ನೆರವೇರಿಸಿದರು.ಅನ್ಸಾರುಲ್ ಮುಸ್ಲಿಮೀನ್
ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಮುಹಮ್ಮದ್ ಕುಂಞಿ ಗೂನಡ್ಕ, ಎಂ.ಜೆ.ಎಂ ಪ್ರ.ಕಾರ್ಯದರ್ಶಿ ಅಬ್ದುಲ್ ಮಜೀದ್ ಕೆ.ಬಿ, ರಶೀದ್ ಜಟ್ಟಿಪಳ್ಳ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಸಿರಾಜುದ್ದೀನ್ ಫ್ಯಾನ್ಸಿ ಎಂ.ಎಸ್.ಡಬ್ಲ್ಯೂ, ಸಿದ್ದೀಕ್ ಮಾಸ್ಟರ್ ಅನ್ಸಾರಿಯಾ ಎಸ್.ಎಸ್.ಎಲ್.ಸಿ ನಂತರದ ಶಿಕ್ಷಣದ ಕುರಿತು ಮಾಹಿತಿ ನೀಡಿದರು.ಗಾಂಧಿನಗರ ಮದ್ರಸ ಉಸ್ತುವಾರಿ ಹಮೀದ್ ಬೀಜಕೊಚ್ಚಿ, ಪತ್ರಕರ್ತ ಹಸೈನಾರ್ ಜಯನಗರ, ಜಮಾತ್ ಕಮಿಟಿ ಸದಸ್ಯ ಇಬ್ರಾಹಿಂ ಶಿಲ್ಪ, ಸಂಸ್ಥೆಯ ಮುಖ್ಯಸ್ಥ ಆಶಿಕ್ ಸುಳ್ಯ, ಪ್ರಾಂಶುಪಾಲರಾದ ಅಬ್ದುಲ್ ಮುಜೀಬ್ ಕೆ.ಬಿ, ಎನ್-ಲೈಟ್ ತಂಡದ ಮಸೂದ್ ಮಚ್ಚು, ಶಹೀದ್ ಪಾರೆ, ರಾಶಿದ್ ಪೇರೆ, ರಬೀಝ್ ಆಝಾದ್, ಸಂಸ್ಥೆಯ ಅಧ್ಯಾಪಕರಾದ ಅಬ್ದುಲ್ ರವೂಫ್, ಉಪಸ್ಥಿತರಿದ್ದರು.ಎಸ್.ಎಸ್.ಎಲ್.ಸಿ ಫಲಿತಾಂಶ ಬಳಿಕ ಸುಳ್ಯ ತಾಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ಎನ್-ಲೈಟ್ ಅಕಾಡೆಮಿ ವತಿಯಿಂದ ‘ಶೈಕ್ಷಣಿಕ ಮಾಹಿತಿ ಕಾರ್ಯಾಗಾರ (ಕೆರಿಯರ್ ಗೈಡೆನ್ಸ್)’ ನಡೆಸಲಾಗುವುದು ಎಂದು ತಿಳಿಸಿದರು.
ಮಸೂದ್ ಸ್ವಾಗತಿಸಿ ವಂದಿಸಿದರು, ನಿಸಾರ್ ಶೈನ್ ನಿರೂಪಿಸಿದರು.