ಸುಳ್ಯ:ವಿಶ್ವದ 2ಮಿಲಿಯನ್ ಮಂದಿ ಮಾತನಾಡುವ ಭಾಷೆ ಇಂಗ್ಲೀಷ್. ಜ್ಞಾನ ಸಂಗ್ರಹದ ಮಾಹಿತಿಯ ಮೂಲದ ಹೆಚ್ಚಿನ ಗ್ರಂಥಗಳು ಇಂಗ್ಲೀಷ್ನಲ್ಲಿ ಲಭಿಸುತ್ತದೆ. ನಮ್ಮ ವಿಚಾರಗಳನ್ನು ವ್ಯಕ್ತ ಪಡಿಸಲು, ಶಿಕ್ಷಣ ವ್ಯವಸ್ಥೆಯಲ್ಲಿ, ಉದ್ಯೋಗ, ವ್ಯಾವಹಾರಿಕ,ಹಾಗೂ ಹೆಚ್ಚಿನ ದೇಶಗಳಲ್ಲಿ ಆಡಳಿತ ಕ್ಷೇತ್ರದಲ್ಲಿ ಇಂಗ್ಲೀಷ್ ಬಳಕೆಯಲ್ಲಿದ್ದು ನಮ್ಮ ದೈನಂದಿನ ಬದುಕಿನಲ್ಲಿ ಸಂವಹನ ಭಾಷೆಯಾಗಿ ಇಂಗ್ಲೀಷ್ ಪ್ರಮುಖ ಪಾತ್ರ
ವಹಿಸುತ್ತದೆ ಎಂದು ತರಬೇತುದಾರರಾದ ಸರಸ್ವತಿ ಸಿ.ಕೆ. ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ Beyond the text book to the world ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಮಾತನಾಡಿ ವಿದ್ಯಾರ್ಥಿಗಳು ಜ್ಞಾನಾಭಿವೃದ್ಧಿಗಾಗಿ ವಿವಿಧ ಭಾಷೆಗಳ ಮೂಲಕ ವಿಷಯಗಳನ್ನು ತಿಳಿಯುವುದು ಬಹಳ ಮುಖ್ಯ ಎಂದು ಹೇಳಿದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ, ಕಾರ್ಯಕ್ರಮ ಸಂಯೋಜಕಿ, ಆಂಗ್ಲ ಭಾಷಾ ಉಪನ್ಯಾಸಕಿ ಪ್ರೇಮ ಲತಾ ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಜ್ಞಾ ಮತ್ತು ಬಳಗದವರು ಪ್ರಾರ್ಥಿಸಿ,ಅಮೋಘ ಎಂ ಎಸ್ ಸ್ವಾಗತಿಸಿದರು.ಆಂಗ್ಲ ಭಾಷಾ ಉಪನ್ಯಾಸಕಿ ಪ್ರೇಮಲತಾ ಎ ಅತಿಥಿಗಳನ್ನು ಪರಿಚಯಿಸಿದರು.ವಿದ್ಯಾರ್ಥಿನಿಯರಾದ ಆಯಿಷತ್ ಅಸ್ನ ಎ ಆರ್ ನಿರೂಪಿಸಿ, ರಿಯಾ ಕೆಜೆ ವಂದಿಸಿದರು.