ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ನೆದರ್ಲ್ಯಾಂಡ್ಗೆ ಗೆಲ್ಲಲು ಇಂಗ್ಲೆಂಡ್ 340 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಆಕರ್ಷಕ ಶತಕ ಸಿಡಿಸಿದರೆ, ಆರಂಭಿಕ
ಬ್ಯಾಟರ್ ಡೇವಿಡ್ ಮಲನ್ ಹಾಗೂ ಕ್ರಿಸ್ ವೋಕ್ಸ್ ಅರ್ಧ ಶತಕ ಬಾರಿಸಿದರು.ಬೆನ್ ಸ್ಟೋಕ್ಸ್ 84 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಗಳ ಸಹಿತ 108 ರನ್
ಡೇವಿಡ್ ಮಲನ್ 74 ಎಸೆತಗಳಲ್ಲಿ 2 ಸಿಕ್ಸರ್ 10 ಬೌಂಡರಿಗಳೊಂದಿಗೆ 87 ರನ್,ಕ್ರಿಸ್ ವೋಕ್ಸ್ 45 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಗಳಿಸಿದರು. ನೆದರ್ಲ್ಯಾಂಡ್ ಪರ ಬಾಸ್ ಡಿ ಲೀಡೆ ತಲಾ 3 ವಿಕೆಟ್ ಪಡೆದರು. ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್ತ್ ತಲಾ 2 ವಿಕೆಟ್ ಪಡೆದರು. ಪಾಲ್ ವ್ಯಾನ್ ಮೀಕೆರನ್ ಒಂದು ವಿಕೆಟ್ ಪಡೆದರು.









