ಕೋಲ್ಕತ್ತ: ಸೋಲಿನೋಂದಿಗೆ ಮಾಜಿ ಚಾಂಪಿಯನ್ ಪಾಕಿಸ್ತಾನ ತನ್ನ ವಿಶ್ವಕಪ್ ಅಭಿಯಾನ ಮುಗಿಸಿದೆ.
ಸೆಮಿಫೈನಲ್ ಪ್ರವೇಶಿಸುವ ಅಸಾಧ್ಯ ಗುರಿಯೊಂದಿಗೆ ಇಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದ ಪಾಕಿಸ್ತಾನ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 93 ರನ್ ಅಂತರದಲ್ಲಿ ಸೋಲನುಭವಿಸಿತು.ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ
ಇಂಗ್ಲೆಂಡ್, ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿತು. ಬೆನ್ಸ್ಟೋಕ್ಸ್ (84), ಜಾನಿ ಬೆಸ್ಟೊ (59) ಹಾಗೂ ಜೋ ರೂಟ್ (60) ಅರ್ಧಶತಕ ಸಿಡಿಸಿದರು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ 43.3 ಓವರ್ಗಳಲ್ಲಿ 244 ರನ್ಗೆ ಆಲ್ ಔಟ್ ಆಯಿತು. ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆಘಾ ಸಲ್ಮಾನ್ (51) ಮಾತ್ರವೇ ಅರ್ಧಶತಕ ಸಿಡಿಸಿ ಪ್ರತಿರೋಧ ತೋರಿದರು. ನಾಯಕ ಬಾಬರ್ ಅಝಂ 38, ಮಹಮ್ಮದ್ ರಿಝ್ವಾನ್ 36 ರನ್ ಗಳಿಸಿದರು.ಪಾಕಿಸ್ತಾನ ಸೆಮಿಫೈನಲ್ಗೆ ಏರಲು 287 ರನ್ ಅಂತರದಲ್ಲಿ ಅಥವಾ 284 ಬಾಲ್ ಉಳಿದಿರುತೆ ಗೆಲ್ಲಬೇಕು ಎಂಬ ಅಸಾಧ್ಯ ಗುರಿ ಇತ್ತು. 9 ಪಂದ್ಯಗಳಲ್ಲಿ 4 ಗೆಲುವು 5 ಸೋಲಿನೊಂದಿಗೆ 8 ಅಂಕ ಪಡೆಸ ಪಾಕಿಸ್ತಾನ 5ನೇ ಸ್ತಾನ ಪಡೆಯಿತು.9 ಪಂದ್ಯಗಳಲ್ಲಿ 3 ಗೆಲುವು 6 ಸೋಲಿನೊಂದಿಗೆ ಇಂಗ್ಲೆಂಡ್ 6 ಅಂಕ ಗಳಿಸಿ 7ನೇ ಸ್ತಾನ ಪಡೆದು ತಮ್ಮ ವಿಶ್ವಕಪ್ ಅಭಿಯಾನ ಮುಗಿಸಿತು.









