ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಕೆ.ವಿ.ಜಿ. ಸಮುದಾಯ ಭವನ, ಅಮರಶ್ರೀಭಾಗ್ನಲ್ಲಿ ನಡೆಯಿತು. ಕೆವಿಜಿ ಡೆಂಟಲ್ ಕಾಲೇಜಿನ ಎಕ್ಸಿಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅಥಿತಿಯಾಗಿ
ಬಂಟ್ವಾಳ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಮತ್ತು ಡೀನ್ ಅಕಾಡೆಮಿಕ್ಸ್ ಡಾ. ಡೆಮಿಯನ್ ಅ್ಯಂಟೋನಿ ಡಿ’ಮೆಲ್ಲೊ ಭಾಗವಹಿಸಿದ್ದರು. ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ. ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಘಟಿಕೋತ್ಸವದ ವರದಿಯನ್ನು ಒಳಗೊಂಡ ಕೈಪಿಡಿಯನ್ನು ಮುಖ್ಯ ಅಥಿತಿ ಡಾ. ಡೆಮಿಯನ್ ಅ್ಯಂಟೋನಿ ಡಿ’ಮೆಲ್ಲೊ ಬಿಡುಗಡೆಗೊಳಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಕಾರ್ಯಕ್ರಮದ ಸಂಯೋಜಕಿ ಹಾಗೂ ಡೀನ್-ಅಕಾಡೆಮಿಕ್ ಡಾ. ಪ್ರಜ್ಞಾ ಯಂ. ಆರ್. ಸಂತೋಷ್ ಜಾಕೆ,ಪೋಷಕರಾದ ಚಂದ್ರಶೇಖರ್ ಕಾಂತಮಂಗಲ ಮಾತನಾಡಿದರು.ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಕೃಷ್ಣರಾಜ್ ಎಂ.ವಿ. ಮತ್ತು ವಿದ್ಯಾರ್ಥಿ ಬಳಗ ಪ್ರಾರ್ಥಿಸಿದರು. ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಸ್ವಾಗತಿಸಿದರು.
ಡಾ. ಸವಿತಾ ಸಿ.ಕೆ. ಅತಿಥಿಯನ್ನು ಪರಿಚಯಿಸಿ ಸನ್ಮಾನ ಪತ್ರ ವಾಚಿಸಿದರು.ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಎಂ. ವಂದಿಸಿದರು. ಪ್ರಾಧ್ಯಾಪಕಿಯರಾದ ಪ್ರೊ. ಪ್ರಜ್ಞ ವಿ.ಟಿ., ಪ್ರೊ. ಸೌಮ್ಯ ಎಂ.ಕೆ. ಹಾಗೂ ಪ್ರೊ. ಆಶ್ರಿತಾ ಕೆ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.












