ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಎಒಎಲ್ಇ ಕಮಿಟಿ ‘ಬಿ’ ನಿರ್ದೇಶಕಿ ಡಾ. ಅಭಿಜ್ಞ ಕೆ.ಆರ್.ಧ್ವಜಾರೋಹಣ ನೆರವೇರಿಸಿದರು. ಶಿಕ್ಷಣದ ಮೂಲಕ ನಾವೆಲ್ಲರೂ ಸಮಾಜದ ನಿರ್ಮಾಣಕಾರರಾಗಬೇಕು. ಶಿಸ್ತಿನಿಂದ ಕರ್ತವ್ಯ ಪಾಲನೆಯಿಂದ ಮತ್ತು ಬದ್ಧತೆಯಿಂದ

ನಮ್ಮ ರಾಷ್ಟ್ರವನ್ನು ಉನ್ನತಿಯೆಡೆಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ.ಉಜ್ವಲ್ ಯು.ಜೆ., ಉಪಪ್ರಾಂಶುಪಾಲ ಡಾ. ಶ್ರೀಧರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಪೂಜಾ, ಹವ್ಯ ಮತ್ತು ತ್ರಿಶಾಲಿ ಹಾಗೂ ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ಕೃಷ್ಣರಾಜ್ ಎಂ. ವಿ. ರಾಷ್ಟçಗೀತೆ ಹಾಡುವುದರ ಮೂಲಕ ಧ್ವಜ ವಂದನೆಯನ್ನು ಸಲ್ಲಿಸಿದರು. ಕಾಲೇಜಿನ ದೈಹಿಕ ಶಿಕ್ಷಕರಾದ ಡಾ. ರಾಜೇಶ್ ಕುಮಾರ್ ಎಂ.ಎಸ್. ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.





