ಏನೆಕಲ್:ರೈತ ಯುವಕ ಮಂಡಲ ಏನೆಕಲ್ ಇದರ ಆಶ್ರಯದಲ್ಲಿ ಏನೇಕಲ್ಲಿ ಗ್ರಾಮಸ್ಥರಿಗೆ ದೀಪಾವಳಿ ಪ್ರಯುಕ್ತ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೈತ ಯುವಕ ಮಂಡಲದ ಅಧ್ಯಕ್ಷ ಮನುದೇವ್ ಪರಮಲೆ ವಹಿಸಿದರು.ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ
ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬೂದಿಪಳ್ಳ ಶುಭ ಹಾರೈಸಿದರು.ನಂತರ ಸರಕಾರಿ ಉದ್ಯೋಗದಿಂದ ನಿವೃತರಾದ ಹಿರಿಯರನ್ನು ಹಾಗೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಖ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಏನೆಕಲ್ ದೇವಸ್ಥಾನದ ಅಧ್ಯಕ್ಷ ನಾಗೇಶ್ ನೆಕ್ರಾಜೆ,ರೈತ ಯುವಕ ಮಂಡಲದ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ,ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಕೋಟಿಗೌಡನಮನೆ, ಚಂದ್ರಿಕಾ, ಉದಯ್ ಕುಮಾರ್ ಬಾನಡ್ಕ, ನಿವೃತರಾದ ಸೀತಾರಾಮ ಮಾದನಮನೆ, ಮುತ್ತಪ್ಪ ಬೂದಿಪಳ್ಳ, ಇಂದಿರಾ ರಾಮಯ್ಯ, ಊರಿನ ಊರು ಗೌಡರುಗಳು, ಯುವಕ ಮಂಡಲದ ಕಾರ್ಯದರ್ಶಿ ಸಾತ್ವಿಕ್ ಚಿದ್ಗಲ್ ಉಪಸ್ಥಿತರಿದ್ದರು.ರಕ್ಷಿತ್ ಪರಮಲೆ ಸ್ವಾಗತಿಸಿ, ವಿಜಯ ಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು. ಸಾತ್ವಿಕ್ ಚಿದ್ಗಲ್ ವಂದಿಸಿದರು.