ಸುಳ್ಯ. ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಎಲಿಮಲೆ ಅಂಗನವಾಡಿ ಮಕ್ಕಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇತನ್ ಎಲಿಮಲೆ, ಕಾರ್ಯದರ್ಶಿ ಅಮರ ಸಂಘಟನಾ ಸಮಿತಿ ವಹಿಸಿದ್ದರು.ಕೃಷ್ಣಯ್ಯ ಮೂಲೆತೋಟ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ
ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಡಿ ಟಿ ದಯಾನಂದ ಕಂದಾಯ ಇಲಾಖೆ ಪುತ್ತೂರು, ಹರಿಪ್ರಸಾದ್ ಎಲಿಮಲೆ ಪಿಡಬ್ಲ್ಯೂಡಿ ಕಾಂಟ್ರಾಕ್ಟ್ ರ್ , ಪ್ರೇಮಾ ಕೇರ ಸದಸ್ಯರು ಗ್ರಾಮ ಪಂಚಾಯತ್ ದೇವಚಳ್ಳ ,ಗುಣವತಿ ಕಲ್ಲಕಟ್ಟೆ, ಅಧ್ಯಕ್ಷರು ಬಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಎಲಿಮಲೆ, ಸುಪ್ರಿಯಾ ಅಂಬೆಕಲ್ಲು ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಕೇಂದ್ರ ಎಲಿಮಲೆ ಇವರು ವಹಿಸಿ ಶುಭ ಹಾರೈಸಿದರು. ಹರ್ಷೀತ್ ದಾತಡ್ಕ ಸ್ವಾಗತಿಸಿ, ಜಯಪ್ರಸಾದ್ ಸಂಕೇಶ ವಂದಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನಾ ಸಮಿತಿಯ ಸದಸ್ಯರಾದ ಶಿವಪ್ರಸಾದ್ ದೊಡ್ಡಿಹಿತ್ಲು, ಪ್ರಸಾದ್ ಬೊಳ್ಳೂರು, ಮನೀಶ್ ಕಡಪಳ, ಸುಧೀರ್ ದೇವ, ಬಾಲಕೃಷ್ಣ ಹೊನ್ನೆಕಡ್ಪು ,ಇವರುಗಳು ಉಪಸ್ಥಿತರಿದ್ದರು.





