ಸುಳ್ಯ: ಸುಳ್ಯ ನಗರ ಸಮೀಪ ಭಸ್ಮಡ್ಕ ಭಾಗದಲ್ಲಿ ಪಯಸ್ವಿನಿ ತೀರದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. 3 ಆನೆಗಳು ಈ ಭಾಗದಲ್ಲಿ ಬೀಡು ಬಿಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎರಡು ದಿನಗಳಿಂದ ಈ ಭಾಗದಲ್ಲಿ ಆನೆಗಳ ಹಿಂಡು ಕಂಡು ಬಂದಿದೆ ಎಂದು ಪ್ರದೇಶದ ಜನರು ತಿಳಿಸಿದ್ದಾರೆ. ಕಾಡಾನೆಗಳು ಬೀಡು ಬಿಟ್ಟಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ನದಿಯ ತೀರದಲ್ಲಿ ಯಾವುದೇ ದಾರಿ ದೀಪ ಇಲ್ಲದೇ ಇರುವುದು ಇನ್ನಷ್ಟು ಸಮಸ್ಯೆ ಉಂಟಾಗಿದೆ. ಪ್ರದೇಶದಲ್ಲಿರುವ ಇರುವ ದಾರಿ ದೀಪಗಳು ಕೂಡ ಉರಿಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕೆಲವು ವರ್ಷಗಳ ಹಿಂದೆ 7 ಆನೆಗಳ ಹಿಂಡು ಭಸ್ಮಡ್ಕ ಭಾಗದಲ್ಲಿ ಬಂದು ಬೀಡು ಬಿಟ್ಟು ಆತಂಕ ಸೃಷ್ಠಿಸಿತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.
previous post