ಸಂಪಾಜೆ: ಸಂಪಾಜೆಯಲ್ಲಿ ನಾಡಿಗೆ ನುಗ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೃಷಿ ಹಾನಿ ಮಾಡಿ ಭೀತಿ ಹುಟ್ಟಿಸಿದ್ದ ಕಾಡಾನೆಯನ್ನು ಕಾಡಿಗೆ ಅಟ್ಟಲಾಗಿದೆ. ಕೊಡಗು ಜಿಲ್ಲಾ ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಫೋರ್ಸ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆನೆಯನ್ನು ಕೈಪಡ್ಕ ಭಾಗದ ಕಾಡಿಗೆ ಅಟ್ಟಲಾಗಿದೆ. ಟಾಸ್ಕ್ ಫೋರ್ಸ್ ತಂಡದ ಸದಸ್ಯರು ಹಾಗೂ
ಸ್ಥಳೀಯರು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಕಾಡಿಗೆ ಅಟ್ಟಲಾಗಿದೆ. ಪಟಾಕಿ, ಗರ್ನಾಲ್ ಸಿಡಿಸಿ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಆನೆಯನ್ನು ರಾಷ್ಟ್ರೀಯ ಹೆದ್ದಾರಿ ದಾಟಿಸಿ ಕಾಡಿಗೆ ಅಟ್ಟಲಾಯುತು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಸದಸ್ಯರಾದ ಅಬೂಸಾಲಿ ಗೂನಡ್ಕ, ಎಸ್.ಕೆ.ಹನೀಫ್ ಪ್ರಮುಖರಾದ ಟಿ.ಎಂ.ಶಹೀದ್ ತೆಕ್ಕಿಲ್, ರವೀಂದ್ರ, ದುರ್ಗಾಪ್ರಸಾದ್, ಸುರೇಶ್ ನಾಯ್ಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಂಪಾಜೆ ಗ್ರಾಮದ ಗಡಿಕಲ್ಲು ಭಾಗದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ ಕಬ್ಬು, ಬಾಳೆ ತೋಟವನ್ನು ನಾಶ ಮಾಡಿತ್ತು. ಕಳೆದ ಕೆಲವು ದಿನಗಳಿಂದ ಕೈಪಡ್ಕ, ಬಾಚಿಗದ್ದೆ, ಕೀಲಾರು, ಗಡಿಕಲ್ಲು ಭಾಗದಲ್ಲಿ ಹಲವು ದಿನಗಳಿಂದ ಕಾಡಾನೆ ಹಾವಳಿಯಿಂದ ತತ್ತರಿಸಿದೆ.