ಮಂಡೆಕೋಲು: ಗಡಿಪ್ರದೇಶವಾದ ಮಂಡೆಕೋಲಿನಲ್ಲಿ ಕಾಡಾನೆಗಳು ಮತ್ತೆ ದಾಳಿ ಮಾಡಿದೆ. ಮಂಡೆಕೋಲಿನ ಕನ್ಯಾನ ಭಾಗಕ್ಕೆ ದಾಳಿ ಮಾಡಿದ ಆನೆಗಳ ಹಿಂಡು ವಿವಿಧ ಸ್ಥಳಗಳಲ್ಲಿ ಕೃಷಿ ಹಾನಿ ಮಾಡಿದೆ. ತೆಂಗು, ಕಂಗು, ಬಾಳೆ ಸಹೀತ ಕೃಷಿ ನಾಶಪಡಿಸಿದೆ. ಕನ್ಯಾನ ಶಾಲೆಯ ಕಾಂಪೌಂಡ್ಗೂ
ಹಾನಿ ಮಾಡಿದೆ. ಕಾಂಪೌಂಡ್ನ ಕಲ್ಲುಗಳನ್ನು ಕೆಡವಿ ಹಾಕಿದೆ. ಮಳೆಗಾಲ ಆರಂಭವಾದೊಡನೆ ಮಂಡೆಕೋಲು ಭಾಗದಲ್ಲಿ ಕಾಡಾನೆಗಳ ದಾಳಿ ಹೆಚ್ಚಳವಾಗಿದೆ.ಆರು ಆನೆಗಳ ಹಿಂಡು ಈ ಭಾಗದಲ್ಲಿ ಕೃಷಿ ನಾಶಪಡಿಸುತ್ತಿದೆ.ಜನ ವಸತಿ ಪ್ರದೇಶದ ಸಮೀಪವೇ ಬೀಡುಬಿಟ್ಟು ಭೀತಿ ಹುಟ್ಟಿಸುವ ಆನೆಗಳ ಹಿಂಡು ರಾತ್ರಿಯ ವೇಳೆಗೆ ತೋಟಗಳಿಗೆ ನುಗ್ಗುತ್ತವೆ ಎಂದು ಕೃಷಿಕರು ಹೇಳುತ್ತಾರೆ.