ಪಾಲಕ್ಕಾಡ್: ಕಾಡಾನೆ ದಾಳಿಗೆ ಸಿಲುಕಿ ನ್ಯೂಸ್ ಚಾನೆಲ್ ಕ್ಯಾಮರಾಮೆನ್ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ. ಮಾತೃಭೂಮಿ ಮಲಯಾಳಂ ನ್ಯೂಸ್ ಚಾನೆಲ್ನ ಕ್ಯಾಮರಾಮೆನ್ ಎ.ವಿ.ಮುಕೇಶ್ (34)ಮೃತ ದುರ್ದೈವಿ. ಬುಧವಾರ ಬೆಳಿಗ್ಗೆ
ಪಾಲಕ್ಕಾಡ್ ಜಿಲ್ಲೆಯ ಕೋಟೆಕ್ಕಾಡ್ ಎಂಬಲ್ಲಿ ಘಟನೆ ನಡೆದಿದೆ.ತನ್ನ ಕೆಲಸದ ಭಾಗವಾಗಿ ಆನೆ ಹಿಂಡಿನ ದೃಶ್ಯ ಶೂಟಿಂಗ್ ಮಾಡುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಮೃತಪಟ್ಟರು ಎಂದು ವರದಿಯಾಗಿದೆ.