ಸುಳ್ಯ: ಮಂಡೆಕೋಲು ಗ್ರಾಮದ ಅಕ್ಕಪ್ಪಾಡಿ ಭಾಗದಲ್ಲಿ ಸೋಮವಾರ ಸಂಜೆಯ ವೇಳೆಗೆ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಅಕ್ಕಪಾಡಿ ಭಾಗದ ಹೊಳೆಯಲ್ಲಿ ಸಾಗಿದ ಆನೆಯು ಸಮೀಪದ ಕಾಡಿಗೆ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಡೆಕೋಲು ಗ್ರಾಮ ಹಲವು ವರ್ಷಗಳಿಂದ ಕಾಡಾನೆ ಹಾವಳಿಯಿಂದ ತತ್ತರಿಸಿದೆ. ರಾತ್ರಿ ಕಾಲದಲ್ಲಿ ರೈತರ ಕೃಷಿ ಭೂಮಿಗೆ ನುಗ್ಗುವ ಕಾಡಾನೆಗಳು ಮತ್ತೆ ಕಾಡಿಗೆ ನುಗ್ಗಿ ಬೀಡು ಬಿಡುತ್ತಿದ್ದವು. ಇದೀಗ ಹಗಲಿನ ವೇಳೆಯಲ್ಲಿಯೇ ಕಾಡಾನೆಗಳು ಪ್ರತ್ಯಕ್ಷವಾಗುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.