ಮಂಗಳೂರು: ಇಂದು ಸಂಜೆ ಚಂದ್ರ ದರ್ಶನವಾಗಿರುವ ಹಿನ್ನಲೆಯಲ್ಲಿ ನಾಳೆ (ಮಾರ್ಚ್ 31) ಕರಾವಳಿ ಸೇರಿದಂತೆ ದೇಶಾದ್ಯಂತ ಈದ್-ಉಲ್-ಫಿತರ್ ಆಚರಿಸಲಾಗುವುದು. ಭಾರತದಲ್ಲಿ ಇಂದು ಚಂದ್ರನ ದರ್ಶನವಾಗಿರುವುದರಿಂದ ನಾಳೆ ಈದ್ ಆಚರಿಸಲಾಗುವುದು. ಶವ್ವಾಲ್ನ ಪ್ರಥಮ
ಚಂದ್ರದರ್ಶನ ರವಿವಾರ ಮುಸ್ಸಂಜೆ ಕೇರಳದ ಕ್ಯಾಲಿಕಟ್ ನಲ್ಲಿ ಆಗಿರುವುದರಿಂದ ಕರಾವಳಿಯಲ್ಲಿ ಸೋಮವಾರ ಈದುಲ್ ಫಿತ್ರ್ ಆಚರಿಸಲು ದ.ಕ. ಉಡುಪಿ, ಉಳ್ಳಾಲ ಖಾಝಿಗಳು ಘೋಷಿಸಿದ್ದಾರೆ. ಈದ್-ಉಲ್-ಫಿತರ್ ಆಧ್ಯಾತ್ಮಿಕ ಚಿಂತನೆ, ಉದಾರತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ವಿಶೇಷ ಈದ್ ಪ್ರಾರ್ಥನೆಯೊಂದಿಗೆ ಈ ದಿನವು ಪ್ರಾರಂಭವಾಗುತ್ತದೆ.